ADVERTISEMENT

ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆ ಇಂದಿನಿಂದ

ಎನ್.ಪಿ.ಕೊಣ್ಣೂರ
Published 13 ಜನವರಿ 2026, 2:58 IST
Last Updated 13 ಜನವರಿ 2026, 2:58 IST
ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯ ಸುಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನ
ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯ ಸುಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನ   

ಹುಕ್ಕೇರಿ: ತಾಲ್ಲೂಕಿನ ಸುಕ್ಷೇತ್ರ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಜ.13 ರಿಂದ 17ರವರೆಗೆ ಜರುಗಲಿದ್ದು, ಜಾತ್ರೆಗೆ ಎಲ್ಲ ಸಿದ್ಧತೆ ಮುಗಿದಿದೆ. ಗುಡಿಗೆ ಬಣ್ಣ ಬಳಿಯುವ ಕಾರ್ಯ, ಸ್ವಚ್ಛತಾ ಕಾರ್ಯ ಮುಗಿದಿದೆ. ಇದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ಸ್ಥಳೀಯರ ಜತೆಗೂ ಸಮನ್ವಯತೆಯ ಸಭೆ ಆಡಳಿತಾಧಿಕಾರಿಯೂ ಆದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮುಗಿಸಿದ್ದಾರೆ.

ಜ.13 ರಂದು ಭವ್ಯ ಮೆರವಣಿಗೆಯೊಂದಿಗೆ ಗ್ರಾಮದಿಂದ ಪಲ್ಲಕ್ಕಿಯನ್ನು ದೇವಸ್ಥಾನಕ್ಕೆ ತರಲಾಗುವುದು. ಅಂದು ಅರಿಶಿಣ ಕಾರ್ಯ ನಡೆಯಲಿದೆ. ಜ.14 ರಂದು ದೇವರ ಲಗ್ನ ನಡೆಯುವುದು. ಆದರೆ ಲಗ್ನದ ಸಮಯದಲ್ಲಿ ‘ಕರಿ’ಬರುವುದರಿಂದ ಲಗ್ನ ಮುಂದೂಡಲಾಗುವುದು. ಇದು ಪ್ರತಿವರ್ಷ ಮರುಕಳಿಸುವುದು.
ಜ.15 ರಂದು ಮುಂಜಾನೆ 10 ಗಂಟೆಗೆ ‘ಅಂತರ್ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ’ಜರುಗಲಿವೆ. ಪ್ರಥಮ ₹25,001, ದ್ವಿತೀಯ ₹20,001, ತೃತೀಯ ₹15,001 ಮತ್ತು ಚತುರ್ಥ ₹10,001, ಐದರಿಂದ ಎಂಟನೆ ಬಹುಮಾನ ₹5001 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದರು.

ಜ.15ರಂದು ಮುಂಜಾನೆ 10 ಗಂಟೆಗೆ ‘ಅಂತರ್ ರಾಜ್ಯಮಟ್ಟದ ‘ಹೊನಲು ಬೆಳಕಿನ ಮಹಿಳಾ ಕಬಡ್ಡಿ ಪಂದ್ಯಾವಳಿ’ಜರುಗಲಿದೆ. ಪ್ರಥಮ ₹25,001, ದ್ವಿತೀಯ ₹20,001, ತೃತೀಯ ₹10,001 ಮತ್ತು ಉತ್ತಮ ತಂಡಕ್ಕೆ ₹7,001 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.

ADVERTISEMENT

ಜ.16 ರಂದು ಮಧ್ಯಾಹ್ನ 2.30 ಗಂಟೆಗೆ ‘ಅಂತರ್ ರಾಜ್ಯಮಟ್ಟದ ಪುರುಷರ ಜಂಗಿ ಕುಸ್ತಿ ಮತ್ತು ಬಹುಮಾನ ವಿತರಣೆ ಸಮಾರಂಭ’ ಜರುಗುವುದು. 

1ಕೆಜಿ ಬೆಳ್ಳಿಖಡೆ!: ಸರ್ವಶ್ರೇಷ್ಠ ಕುಸ್ತಿ ಪಟುವಿಗೆ ಪ್ರಥಮ ₹60,001, ದ್ವಿತೀಯ ₹ 35,001, ತೃತೀಯ ₹25,001 ಮತ್ತು ಚತುರ್ಥ ₹15,001, ಪಂಚಮ ಬಹುಮಾನ ₹12,001, 6ನೇ ಬಹುಮಾನ ₹10,001, 7ನೇ ಬಹುಮಾನ ₹8,001, 8ನೇ ಬಹುಮಾನ ₹7,001, 9ನೇ ಬಹುಮಾನ ₹6,001, 10 ಮತ್ತು 11ನೇ ಬಹುಮಾನ ₹5,001 ನಗದು ಬಹುಮಾನ ಮತ್ತು ಕಮಿಟಿ ವತಿಯಿಂದ ನಗದು ಬಹುಮಾನ ಇರಿಸಲಾಗಿದೆ. ಪಂದ್ಯಾವಳಿ ಮುಖಂಡ ರಮೇಶ್ ಕತ್ತಿ ಉದ್ಘಾಟಿಸುವರು.

ಜ.17 ರಂದು ಬೆಳಿಗ್ಗೆ 10 ಗಂಟೆಗೆ ‘ದನಗಳ ಪ್ರದರ್ಶನ’ವಿದೆ. ಹಲ್ಲು ಹಚ್ಚದೇ ಜೋಡಿ ಹೋರಿ, ಎರಡು ಹಲ್ಲಿನ, ನಾಲ್ಕು ಹಲ್ಲಿನ ಮತ್ತು ಮತ್ತು ಜೋಡಿ ಎತ್ತುಗಳ ಪ್ರದರ್ಶನಕ್ಕೆ ನಗದು ಬಹುಮಾನ ಇರಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿಯೆ ಜರುಗುವವು ಎಂದು ಆಡಳಿತಾಧಿಕಾರಿ ತಹಶೀಲ್ದಾರ್ ಮಲರಾಮ ಕಟ್ಟಿಮನಿ ತಿಳಿಸಿದ್ದಾರೆ.

ಮಹಾಪ್ರಸಾದ: ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಮಹಾಪ್ರಸಾದ ವ್ಯವಸ್ಥೆಯಿದೆ ಎಂದು ಸಹಾಯಕ ಆಡಳಿತಾಧಿಕಾರಿ ಸಿ.ಎ.ಪಾಟೀಲ ತಿಳಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯ ಸುಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನದ ಒಳಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.