ADVERTISEMENT

‘ಸುರೇಶ ಅಂಗಡಿ ಇಲ್ಲದೆ ಅನಾಥವಾದ ಜಿಲ್ಲೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 11:35 IST
Last Updated 24 ಸೆಪ್ಟೆಂಬರ್ 2020, 11:35 IST
ಬೆಳಗಾವಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದವರು ಸಚಿವ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಬೆಳಗಾವಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದವರು ಸಚಿವ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಬೆಳಗಾವಿ: ‘ಹಳ್ಳಿಯಲ್ಲಿ ಜನಿಸಿ ಜನಪ್ರತಿನಿಧಿಯಾಗಿ ಕೇಂದ್ರ ಸಚಿವ ಸ್ಥಾನದವರೆಗೆ ಬೆಳೆದ ಸುರೇಶ ಅಂಗಡಿ ಅವರನ್ನು ಕಳೆದುಕೊಂಡು ಜಿಲ್ಲೆ ಅನಾಥವಾಗಿದೆ’ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಶಿಸ್ತಿನ ಸಿಪಾಯಿಯಾಗಿ, ತಳಮಟ್ಟದ ಕಾರ್ಯಕರ್ತರಾಗಿ ದುಡಿದು ಉನ್ನತ ಹುದ್ದೆಗೆ ಏರಿದ ಬೆಳಗಾವಿಯ ಏಕೈಕ ಸಂಸದ. ಜಿಲ್ಲೆಯ ಭಾಷೆ, ಜಾತಿ, ಧರ್ಮದ ಬೆಂಕಿಯಲ್ಲಿ ಅರಳಿದ ಕಮಲವಾಗಿದ್ದ ಸರಳ ಸಜ್ಜನ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಜಿಲ್ಲೆ ಹಾಗೂ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದು ಸ್ಮರಿಸಿದರು.

ADVERTISEMENT

ಅಂಗಡಿ ಅವರ ಫೋಟೊಗೆ ಪುಷ್ಪನಮನ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಜಿಲ್ಲಾ ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ದನಗೌಡರ, ಉಪಾಧ್ಯಕ್ಷ ಯುವರಾಜ ಜಾಧವ, ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಯುವ ಮೋರ್ಚಾ ಮುಖಂಡ ಈರಣ್ಣ ಅಂಗಡಿ, ವಾಸಂತಿ ಬಡೀಗೇರ, ವೀರಭದ್ರಯ್ಯ ಪೂಜಾರ, ನಿತಿನ ಚೌಗಲೆ, ಯಲ್ಲೇಶ ಕೋಲಕಾರ, ಚೇತನ ಪಾಟೀಲ, ಉಮೇಶ ಪುರಿ, ಡಾ.ಸೋನಾಲಿ ಸರ್ನೋಬತ್‌, ಪ್ರದೀಪ ಸಾಣಿಕೊಪ್ಪ, ಜಿತೇಂದ್ರ ಮಾದರ, ಶಾಲು ಫರ್ನಾಂಡಿಸ್, ಈರಣ್ಣ ಚಂದರಗಿ, ಸಿದ್ದರಾಮಯ್ಯ ಹಿರೇಮಠ, ಭಾಗ್ಯಶ್ರೀ ಕೊಕಿತಕರ, ಬಸವರಾಜ ದಮ್ಮಣಗಿ, ಯಲ್ಲಪ್ಪ ಪಾಟೀಲ, ಸಂಜಯ ಕಂಚಿ, ಹೇಮಂತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.