
ಮುನವಳ್ಳಿ: ಕಟಕೋಳ ಗ್ರಾಮದ ಪ್ರಿಯದರ್ಶಿನಿ ಕನ್ನಡ ವಿದ್ಯಾಲಯದ ಹಿರೇಮಠ ಶಾಲೆಯ 36 ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಸಮಾರಂಭವನ್ನು ಯುವ ಮುಖಂಡ ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಸಂಸ್ಕೃತಿ ಕಲಿಸುತ್ತಿರುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ ಎಂದರು.
ವೀರಭದ್ರಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ಉನ್ನತಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುತ್ತುರಾಜ ಬಡಿಗೇರ ಉಪನ್ಯಾಸ ನೀಡಿದರು. ರೇಣುಕ ಗಡದೇಶ್ವರ ದೇವರು, ಟಿ.ಪಿ.ಮನೋಳಿ ಹಾಜರಿದ್ದರು.
ಶಿವಾನಂದ ಚಾಯಪ್ಪಗೋಳ, ಎಸ್.ಪಿ.ಕರಲಿಂಗಪ್ಪನವರ, ಬಿ.ಡಿ.ಹಿರೇಮಠ, ಟಿ.ಎನ್.ಮುರಂಕರ, ಪಿ.ಸಿ.ಹೂಲಿ, ಗಂಗಾಧರಯ್ಯ ಹಿರೇಮಠ, ಬಾಳನಗೌಡ ಹೊಸಮನಿ, ನವೀನ ನಲವಡೆ, ಎಸ್.ವಿ.ದಿವಟಗಿ, ಪ್ರಕಾಶ ಪವಾರ, ರಮೇಶ ಕಾಡೇಶನವರ, ಕಲ್ಲಪ್ಪ ತುಪ್ಪದ, ತಾರಾಬಾಯಿ ನಲವಡೆ, ಅವಿನಾಶ ನಲವಡೆ ಹಾಜರಿದ್ದರು. ಎಮ್.ಎಚ್.ಹಗೆದಾಳ ಸ್ವಾಗತಿಸಿದರು, ಶಿಕ್ಷಕ ಜಂಗನ್ನವರ ನೀರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.