ಬೆಳಗಾವಿ: ಶ್ರೀರಾಮ ಸೇನೆ ಹಾಗೂ ಬಜರಂಗ ದಳದವರು ಎನ್ನಲಾದ ಯುವಕರ ಗುಂಪೊಂದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಮ್’ ಎಂದು ಹೇಳಿಸಿದ ಘಟನೆ ಜಿಲ್ಲೆಯ ರಾಯಬಾಗದ ರೋಹಿದಾಸ ಗಲ್ಲಿಯಲ್ಲಿ ನಡೆದಿದೆ.
ಅಭಿಷೇಕ್ ಕದಂ ಎನ್ನುವವರು ಹಲ್ಲೆಗೊಳಗಾದವರು.
‘ಜೈಶ್ರೀರಾಮ್’ ಎನ್ನುವಂತೆ ಒತ್ತಾಯ ಹೇರಿ, ಕಪಾಳಕ್ಕೆ ಹೊಡೆದಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ ವ್ಯಕ್ತಿಯು, ‘ಇನ್ಮುಂದೆ ಹಿಂದೂ ಧರ್ಮಕ್ಕೆ ಅಥವಾ ಹಿಂದೂ ಸಂಘಟನೆಯವರಿಗೆ ಬೈಯುವುದಿಲ್ಲ. ನನ್ನಿಂದ ತಪ್ಪಾಗಿದೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.