ಅಥಣಿ: ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಪರಿಮಳ ಸಭಾಭವನದಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲಾ, ರಾಘವೇಂದ್ರ ಸ್ವಾಮಿ ಮಠ ಟ್ರಸ್ಟ್ ಹಾಗೂ ಧಾರವಾಡದ ಮಹಿಪತಿ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಏಪ್ರಿಲ್ 13ರಂದು ಬೆಳಿಗ್ಗೆ 11ಕ್ಕೆ ರಾಧಿಕಾ ಕಾಖಂಡಿಕಿ ಅವರು ಬರೆದ ‘ಹರಿದಾರಿ ಶ್ರುತಿಗೊಂಡಾಗ’(ಭೀಮದಾಸರ ನೆನಪುಗಳು) ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಮನೋಹರ ಗ್ರಂಥಮಾಲಾ ಪ್ರಕಟಿಸಿದ ಈ ಕೃತಿಯನ್ನು ವಿಮರ್ಶಕ ಶ್ಯಾಮಸುಂದರ ಬಿದರಕುಂದಿ ಲೋಕಾರ್ಪಣೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಅರವಿಂದ ದೇಶಪಾಂಡೆ, ಹರ್ಷ ಡಂಬಳ ಮತ್ತು ಡಾ.ಕೃಷ್ಣ ಕಟ್ಟಿ ಆಗಮಿಸುವರು. ಅನಿಲ ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಲೇಖಕಿ ರಾಧಿಕಾ ಕಾಖಂಡಿಕಿ, ಪ್ರಕಾಶಕ ಸಮೀರ ಜೋಶಿ ಉಪಸ್ಥಿತರಿರುವರು. ನಂತರ ದಾಸ ಸಾಹಿತ್ಯ ಕುರಿತು ಸಂವಾದ ಗೋಷ್ಠಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Cut-off box - ‘ಗುರುವಿನ ಸನ್ಮಾರ್ಗದಿಂದ ಬದುಕು ಬಂಗಾರ’ ಬೈಲಹೊಂಗಲ: ‘ಗುರು ಮುಟ್ಟಿ ಗುರುವಾಗುವ ಧರ್ಮ ನಮ್ಮದು. ಇಲ್ಲಿ ಗುರು ನೀಡಿದ ಇಷ್ಟಲಿಂಗ ಪೂಜೆ ಶಿವಯೋಗ ಸಾಧನೆ ಕಾಯಕ ದಾಸೋಹದ ಸನ್ಮಾರ್ಗದ ಆದರ್ಶಗಳು ನಮ್ಮನ್ನು ಗುರುವಿನ ಸ್ಥಾನಕ್ಕೆ ಕರೆದೊಯ್ಯುತ್ತದೆ' ಎಂದು ಹುಣಶೀಕಟ್ಟಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು. ತಾಲ್ಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ನಡೆದ ಬಸವತತ್ವ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮಿಗಳು ಮಾತನಾಡಿದರು. ದೇಗುಲಹಳ್ಳಿ ವಿರೇಶ್ವರ ಸ್ವಾಮೀಜಿ ನಿಚ್ಚಣಕಿಯ ಪಂಚಾಕ್ಷರಿ ಮಹಾಸ್ವಾಮಿಗಳು ಮಡಿವಾಳೇಶ್ವರ ಜೀವನ ಚರಿತ್ರೆಯನ್ನು ಪ್ರವಚನಗೈದರು ಕಾಂಗ್ರೆಸ್ ಮುಖಂಡ ನಾನಾಸಾಹೇಬ ಪಾಟೀಲ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ ದಾಸೋಹಿಗಳಾದ ನಿರಂಜನ ಮೆಟ್ಯಾಲ ಮಡಿವಾಳಪ್ಪ ಲಕ್ಕನಗೌಡ್ರ ರತ್ನಮ್ಮ ಪಡಸಲಗಿ ಪಾರ್ವತೆವ್ವ ಚನ್ನಪ್ಪಗೌಡರ ಶೋಭಾ ಆಲದಕಟ್ಟಿ ಕಾವೇರಿ ಮೆಳವಂಕಿ ಚಂದ್ರು ಮೆಳವಂಕಿ ಸಿಂಹಣ್ಣಾ ನರಸನ್ನವರ ಚಂದ್ರಶೇಖರ ನರಸನ್ನವರ ಪಕ್ಕೀರಪ್ಪ ನರಸನ್ನವರ ಸುಭಾಷ ನರಸನ್ನವರ ಹಾಗೂ ಸೂತ್ತಮೂತ್ತಲಿನ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.