ADVERTISEMENT

ಅಥಣಿ: ಅಗ್ರಾಣಿ ಹಳ್ಳದಲ್ಲಿ ತೇಲಿ ಹೋಗಿ ಇಬ್ಬರು ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:40 IST
Last Updated 27 ಮೇ 2025, 15:40 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕಾಗವಾಡ (ಬೆಳಗಾವಿ ಜಿಲ್ಲೆ): ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಚಕ್ಕಡಿ ಮೇಲೆ ಮಳೆ ನೀರಿನಿಂದ ತುಂಬಿದ್ದ ಹಳ್ಳ ದಾಟಲು ಯತ್ನಿಸಿ ನಾಗನೂರ ಪಿಎ ಗ್ರಾಮದ ದೀಪಕ ಸಂಜಯ ಕಾಂಬಳೆ (9) ಮತ್ತು‌ ಗಣೇಶ ಸಂಜಯ ಕಾಂಬಳೆ (7) ತೇಲಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಒಂದು ಎತ್ತು ಕೂಡ ಸಾವನ್ನಪ್ಪಿದೆ.

ADVERTISEMENT

ಮತ್ತೊಬ್ಬ ಬಾಲಕ ವೇದಾಂತ ಸಂಜಯ ಕಾಂಬಳೆ ಗಂಭೀರವಾಗಿ ಗಾಯಗೊಂಡಿದ್ದು ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಅಗ್ರಾಣಿ ಹಳ್ಳದಾಟುವಾಗ ಮರಳು ತೆಗೆದ ಗುಂಡಿಯೊಳಗೆ ಎತ್ತು ಆಯತಪ್ಪಿ ಬಿದ್ದಿದ್ದರಿಂದ ಬಂಡಿಯಲ್ಲಿದ್ದ ಮೂವರು ಮಕ್ಕಳು ನೀರಿಗೆ ಬಿದ್ದಿದ್ದಾರೆ. ಚಕ್ಕಡಿ ಓಡಿಸುತ್ತಿದ್ದ ಬಾಲಕರ ತಂದೆ ಸಂಜಯ ಕಾಂಬಳೆ ಒಬ್ಬ ಮಗನನ್ನು ರಕ್ಷಣೆ ಮಾಡಿದ್ದು ಆತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಳವಾದ ಗುಂಡಿಗೆ ಸಿಲುಕಿದ್ದ ಎತ್ತು ಸಹ ಸ್ಥಳದಲ್ಲೇ ಮೃತಪಟ್ಟಿದೆ. ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ನೀರಿನಿಂದ ಹೊರ ತೆಗೆಯಲಾಗಿದೆ’ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.