ADVERTISEMENT

ಕಾರ್ಮಿಕ ಕುಟುಂಬಗಳಿಗೆ ಹಾಸ್ಟೆಲ್‌ನಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:21 IST
Last Updated 30 ಮಾರ್ಚ್ 2020, 14:21 IST
ಬೆಳಗಾವಿಯಲ್ಲಿ ಆಶ್ರಯ ನೀಡಿರುವ ರಾಜಸ್ಥಾನದ ಕಾರ್ಮಿಕ ಕುಟುಂಬದವರಿಗೆ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ಉಪಾಹಾರ ಹಾಗೂ ಮಾಸ್ಕ್‌ ವಿತರಿಸಿದರು
ಬೆಳಗಾವಿಯಲ್ಲಿ ಆಶ್ರಯ ನೀಡಿರುವ ರಾಜಸ್ಥಾನದ ಕಾರ್ಮಿಕ ಕುಟುಂಬದವರಿಗೆ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ಉಪಾಹಾರ ಹಾಗೂ ಮಾಸ್ಕ್‌ ವಿತರಿಸಿದರು   

ಬೆಳಗಾವಿ: ಬೆಂಗಳೂರಿನಿಂದ ರಾಜಸ್ಥಾನಕ್ಕೆ ಲಾರಿಯಲ್ಲಿ ತೆರಳುತ್ತಿದ್ದ ಕಾರ್ಮಿಕರ ಕುಟುಂಬದವರನ್ನು ಇಲ್ಲಿನ ಪೊಲೀಸರು ಸೋಮವಾರ ತಡೆದಿದ್ದಾರೆ.

ಅವರಿಗೆ ಇಲ್ಲಿನ ನೆಹರು ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಆಶ್ರಯ ಕಲ್ಪಿಸಲಾಗಿದೆ.

ನಗರಪಾಲಿಕೆಯಿಂದ ಬೆಳಿಗ್ಗೆ ಅವರಿಗೆ ಪಲಾವ್ ನೀಡಲಾಗಿತ್ತು. ಇದು ಬೇಡ, ಚಪಾತಿ ಬೇಕೆಂದು ಪಟ್ಟು ಹಿಡಿದಿದ್ದರು. ನಮ್ಮನ್ನು ಬಿಟ್ಟುಬಿಡಿ ನಮ್ಮ ಊರಿಗೆ ಹೋಗುತ್ತೇವೆ ಎಂದು ದುಂಬಾಲು ಬಿದ್ದಿದ್ದರು. ಕೊರೊನಾ ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅವರನ್ನು ಇಲ್ಲಿಯೇ ಇರಿಸಲಾಗಿದೆ. ಲಾಕ್‌ಡೌನ್‌ ಕೂಡ ಇರುವುದರಿಂದ ಅವರನ್ನು ಕಳುಹಿಸಲಾಗಿಲ್ಲ ಎಂದು ಗೊತ್ತಾಗಿದೆ.

ADVERTISEMENT

ಅವರಿಗೆ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಮಾಸ್ಕ್‌ಗಳನ್ನು ವಿತರಿಸಿದರು. ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.