ADVERTISEMENT

ಜಿಐಟಿ: ಅರಿವು ಕಾರ್ಯಕ್ರಮ 26ರಂದು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 12:54 IST
Last Updated 23 ಸೆಪ್ಟೆಂಬರ್ 2021, 12:54 IST

ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು ಸೆ.26ರಂದು ಬೆಳಿಗ್ಗೆ 10ಕ್ಕೆ ‘ಎಂಜಿನಿಯರಿಂಗ್ ಕೋರ್ಸ್‌ಗಳ ಬಗ್ಗೆ ಅರಿವು ಕಾರ್ಯಕ್ರಮ’ ಹಮ್ಮಿಕೊಂಡಿದೆ.

ಕೆಇಎ ಸಿಇಟಿ ಸಹಾಯವಾಣಿ ಕೇಂದ್ರದ ನೋಡಲ್ ಅಧಿಕಾರಿ ರಾಜು ಎಸ್. ಬಸಣ್ಣವರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸೀಟು ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.

‘ಯಾವೆಲ್ಲ ರೀತಿಯ ಕೋರ್ಸ್‌ಗಳು ಲಭ್ಯ ಇವೆ. ಅವುಗಳನ್ನು ಆಸಕ್ತಿಗೆ ಅನುಗುಣವಾಗಿ ಹೇಗೆ ಆಯ್ಕೆ ಮಾಡಬೇಕು. ಕಾಲೇಜುಗಳ ಆಯ್ಕೆಯಲ್ಲಿ ಯಾವೆಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವ ಕೋರ್ಸ್‌ಗಳಿಗೆ ಎಷ್ಟು ಅವಕಾಶಗಳಿವೆ ಮೊದಲಾದ ಅಂಶಗಳ ಬಗ್ಗೆ ಕಾರ್ಯಕ್ರಮವು ಒಳನೋಟ ನೀಡಲಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ತಿಳಿಸಿದ್ದಾರೆ.

ADVERTISEMENT

‘ಆಕಾಂಕ್ಷಿಗಳು ಸದ್ಬಳಕೆ ಮಾಡಿಕೊಳ್ಳಬಹುದು. ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದೆ. ಅಂದು ಬೆಳಿಗ್ಗೆ 9ರಿಂದ 9.30ರವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಕಾಲೇಜಿನ ಬಸ್ ಸೇವೆಯೂ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 8088007011, 9036855485 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.