ADVERTISEMENT

ತಂಬಾಕಿನಿಂದ ದುಷ್ಪರಿಣಾಮ: ಜಾಗೃತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 14:34 IST
Last Updated 11 ಜೂನ್ 2021, 14:34 IST
ಬೆಳಗಾವಿಯ ಸರ್ದಾರ್‌ ಮೈದಾನದಲ್ಲಿ ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಶುಕ್ರವಾರ ಜಾಗೃತಿ ಮೂಡಿಸಲಾಯಿತು
ಬೆಳಗಾವಿಯ ಸರ್ದಾರ್‌ ಮೈದಾನದಲ್ಲಿ ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಶುಕ್ರವಾರ ಜಾಗೃತಿ ಮೂಡಿಸಲಾಯಿತು   

ಬೆಳಗಾವಿ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಇಲ್ಲಿನ ಸರ್ದಾರ್‌ ಕಾಲೇಜು ಮೈದಾನದಲ್ಲಿ ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಗಳಿಗೆ, ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಶುಕ್ರವಾರ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ‘ತಂಬಾಕು ತ್ಯಜಿಸಲು ಬದ್ಧರಾಗಿರಿ’ ಎನ್ನುವುದು ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ‘ನಗರ ವ್ಯಾಪ್ತಿಯಲ್ಲಿ ಬರುವ ತಂಬಾಕು ಉತ್ಪನ್ನ ಮಾರುವವರು ಉದ್ಯಮ ಪರವಾನಗಿ ಪಡೆದುಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳ 100 ಗಜದ ಅಂತರದೊಳಗೆ ಮಾರದಂತೆ ಹಾಗೂ ಕೋಟ್ಟಾ ಕಾಯ್ದೆಯ 6(ಎ) ಅಡಿಯ ಅಪ್ರಾಪ್ತ ವಯಸ್ಕರಿಗೆ ನೀಡಬಾರದು ಮತ್ತು ಅಪ್ರಾಪ್ತ ವಯಸ್ಕರಿಂದ ಮಾರಿಸಬಾರದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾ ಸಲಹೆಗಾರ್ತಿ ಡಾ.ಶ್ವೇತಾ ಪಾಟೀಲ ಮಾತನಾಡಿದರು.‌ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಟಿ-ಶರ್ಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆ ಕವಿತಾ ರಾಜನ್ನವರ ನಿರೂಪಿಸಿದರು. ಆಶಾ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.