ADVERTISEMENT

ಸಂಭ್ರಮದ ಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:12 IST
Last Updated 7 ಫೆಬ್ರುವರಿ 2023, 5:12 IST
ಕಡಬಿ ಸಮೀಪದ ಮುಗಳಿಹಾಳದಲ್ಲಿ ಭಾನುವಾರ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು
ಕಡಬಿ ಸಮೀಪದ ಮುಗಳಿಹಾಳದಲ್ಲಿ ಭಾನುವಾರ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು   

ಕಡಬಿ: ಸಮೀಪದ, ಯರಗಟ್ಟಿ ತಾಲ್ಲೂಕಿನ ಸುಕ್ಷೇತ್ರ ಮುಗಳಿಹಾಳ ಬಸವೇಶ್ವರ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ಭಾಗೋಜಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಮುಗಳಿಹಾಳದ ಶಿವಪುತ್ರ ಸ್ವಾಮಿಗಳು ಹಾಗೂ ಸಾಧು, ಸಂತರು ನೇತೃತ್ವ ವಹಿಸಿದ್ದರು. ಗ್ರಾಮದ ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿ, ರಥದ ಮುಂದೆ ಸಾಗಿದರು.

ಅಪಾರ ಭಕ್ತರು ಸೇರಿ ಜಗಜ್ಯೋತಿ ಬಸವಣ್ಣನವರಿಗೆ ಜೈ ಎಂದು ಜೈಕಾರ ಹಾಕುತ್ತ ರಥ ಎಳೆದರು. ಹೂವು, ಹಣ್ಣು, ಕಾರೀಕ್‌ ಹಾರಿಸುತ್ತ ಭಕ್ತಿಗೆ ಮೆರೆದರು. ದಾರಿಯುದ್ದಕ್ಕೂ ಭಕ್ತರು ಹಸಿರು ತಳಿಯ– ತೋರಣಗಳಿಂದ ಅಲಂಕಾರ ಮಾಡಿದ್ದರು. ಭಜಣೆ, ಡೊಳ್ಳು, ಜಾಂಜ್‌ ಪಥಕ್‌, ಮುಂತಾದ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಮೆರಗು ತಂದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.