ADVERTISEMENT

ಖಾನಾಪುರ: ಬಸವೇಶ್ವರರ ಫೋಟೊಗೆ ಸಗಣಿ ಹಾಕಿ ಅವಮಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 11:45 IST
Last Updated 20 ಡಿಸೆಂಬರ್ 2021, 11:45 IST
ಜಗಜ್ಯೋತಿ ಬಸವೇಶ್ವರ ಫೋಟೊಗೆ ಸಗಣಿ ಮೆತ್ತಿರುವುದು
ಜಗಜ್ಯೋತಿ ಬಸವೇಶ್ವರ ಫೋಟೊಗೆ ಸಗಣಿ ಮೆತ್ತಿರುವುದು   

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದಕ್ಕೆ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಸಂದರ್ಭದಲ್ಲೇ, ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಫೋಟೊಗೆ ಸಗಣಿ ಮೆತ್ತಿ ಸೋಮವಾರ ಅವಮಾನಿಸಲಾಗಿದೆ.

ಆ ಗ್ರಾಮದ ಬಸವೇಶ್ವರ ವೃತ್ತಕ್ಕೆ ಹಾಕಿರುವ ಫೋಟೊಗೆ ಸಗಣಿ ಹಾಕಲಾಗಿದೆ. ಅದೇ ವೃತ್ತದಲ್ಲಿ ಅಳವಡಿಸಿದ್ದ ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಅಲ್ಲಿನ ಗ್ರಾಮ ಪಂಚಾಯ್ತಿ ಆವರಣದಲ್ಲಿದ್ದ ಕನ್ನಡ ಬಾವುಟವನ್ನೂ ಕಿತ್ತು ಹಾಕಿದ್ದಾರೆ.

ಕಿಡಿಗೇಡಿಗಳ ಕೃತ್ಯವನ್ನು ಕನ್ನಡಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.

ADVERTISEMENT

‘ಸಮ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ ಬಸವಣ್ಣನವರ ಫೋಟೊಗೆ ಸಗಣಿ ಮೆತ್ತಿ ಅವಮಾನಿಸಿರುವುದು ಖಂಡನೀಯ. ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಒತ್ತಾಯಿಸಿದ್ದಾರೆ.

ನಿಪ್ಪಾಣಿ ಬಂದ್:

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿದ್ದನ್ನು ಖಂಡಿಸಿ, ವಿವಿಧ ಸಂಘಟನೆಗಳವರು ಸೋಮವಾರ ಕರೆ ನೀಡಿದ್ದ ನಿಪ್ಪಾಣಿ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.