ADVERTISEMENT

ಬಸವೇಶ್ವರ ಸೊಸೈಟಿ: ₹4.13 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 5:00 IST
Last Updated 26 ಏಪ್ರಿಲ್ 2022, 5:00 IST
ಬಸವರಾಜ ತೇಲಿ, ಅಧ್ಯಕ್ಷರು
ಬಸವರಾಜ ತೇಲಿ, ಅಧ್ಯಕ್ಷರು   

ಮೂಡಲಗಿ: ಇಲ್ಲಿಯ ಶ್ರೀ ಬಸವೇಶ್ವರ ಅರ್ಬನ್‌ ಕೋ ಆಪ್‌ ಕ್ರೆಡಿಟ್‌ ಸೊಸೈಟಿಯು ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದಲ್ಲಿ ₹4.13 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಸವರಾಜ ತೇಲಿ ತಿಳಿಸಿದರು.

ಸೊಸೈಟಿಯ ಲಾಭ ಮತ್ತು ಪ್ರಗತಿ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿಯು ಮಾರ್ಚ್‌ ಅಂತ್ಯಕ್ಕೆ ₹5.8 ಕೋಟಿ ಶೇರು ಬಂಡವಾಳ, ₹182 ಕೋಟಿ ದುಡಿಯುವ ಬಂಡವಾಳ, ₹13.90 ಕೋಟಿ ನಿಧಿಗಳು, ₹155 ಕೋಟಿ ಸರ್ವಾಜನಿಕ ವಲಯದಿಂದ ಠೇವು ಸಂಗ್ರಹಿಸಿದೆ. ₹111 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವನ್ನು ನೀಡಿದೆ. ಠೇವಣಿದಾರರ ಭದ್ರತೆಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹49 ಕೋಟಿ ಠೇವು ಇಡಲಾಗಿದೆ ಎಂದರು.

ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮಾತನಾಡಿ, ಸದ್ಯ ಸೊಸೈಟಿಯ 9,824 ಸದಸ್ಯರನ್ನು ಮತ್ತು 16 ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ ಎಂದರು. ಸೊಸೈಟಿಯ ಉಪಾಧ್ಯಕ್ಷ ಗಿರೀಶ ಢವಳೇಶ್ವರ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರಿಗೆ ಸಾಲವನ್ನು ನೀಡುತ್ತಿರುವುದಲ್ಲದೆ, ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ADVERTISEMENT

ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ರವೀಂದ್ರ ಭಾಗೋಜಿ, ಶ್ರೀಶೈಲ್‌ ಮದಗಣ್ಣವರ, ಮಲ್ಲಿಕಾರ್ಜುನ ಢವಳೇಶ್ವರ, ದೇವಪ್ಪ ಕೌಜಲಗಿ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.