ADVERTISEMENT

ಬೆಳಗಾವಿ: ‘ನಿರುಪಮಾ’ ಸಿಂಹ ಸಾವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:32 IST
Last Updated 6 ಫೆಬ್ರುವರಿ 2025, 15:32 IST
‘ನಿರುಪಮಾ’ ಸಿಂಹ
‘ನಿರುಪಮಾ’ ಸಿಂಹ   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ 15 ವರ್ಷ ವಯಸ್ಸಿನ ‘ನಿರುಪಮಾ’ ಹೆಸರಿನ ಸಿಂಹ ಬಹುಅಂಗಾಂಗ ವೈಫಲ್ಯ ಮತ್ತು ವೃದ್ಧಾಪ್ಯದಿಂದ ಗುರುವಾರ ಮೃತಪಟ್ಟಿದೆ.

‘ಬನ್ನೇರುಘಟ್ಟ ಮೃಗಾಲಯದಿಂದ 2021ರಲ್ಲಿ ಭೂತರಾಮನಹಟ್ಟಿಯ ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದ್ದ ‘ನಿರುಪಮಾ’ಗೆ ಕಂಡು ಪ್ರವಾಸಿಗರು ಸಂಭ್ರಮಿಸುತ್ತಿದ್ದರು. ಶ್ವಾಸಕೋಶ, ಲಿವರ್‌ ಮತ್ತಿತರ ಅಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಸಿಂಹಕ್ಕೆ 15 ದಿನಗಳಿಂದ ಉಪಚರಿಸಲಾಗುತಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ಮಾಡಲಾಯಿತು’ ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT