ಮೂಡಲಗಿ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಅಮೃತ್ 2.0 ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಬೆಳಗಾವಿ ವಿಭಾಗದ ಜಿಲ್ಲೆಯ 32 ನಗರ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಶೇ 50, ರಾಜ್ಯ ಸರ್ಕಾರದ ಶೇ 40 ಹಾಗೂ ಸಾರ್ವಜನಿಕರ ವಂತಿಕೆ ಶೇ 10 ಈ ಅನುಪಾತದಲ್ಲಿ ಒಟ್ಟು ₹836.45 ಕೋಟಿ ಅನುದಾನ ಮಂಜೂರಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅದರಲ್ಲೂ ವಿಶೇಷವಾಗಿ ಮೂಡಲಗಿ, ನಾಗನೂರು, ಕಲ್ಲೋಳಿ, ಅರಭಾವಿ, ಘಟಪ್ರಭಾ ಈ ಐದು ಅವಳಿ ಪಟ್ಟಣಗಳಲ್ಲಿ ನಿರಂತರ ನೀರು ಪೂರೈಸುವ ಉದ್ದೇಶದಿಂದ ₹165 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಅತಿ ಶೀಘ್ರದಲ್ಲಿ ಉಳಿದೆಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿ ಅನುಷ್ಠಾನಗೊಳಿಸಿರುವ ಕೇಂದ್ರ ನಗರ ವ್ಯವಹಾರಗಳ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಹಾಗೂ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಾರ್ಯವನ್ನು ಈರಣ್ಣ ಕಡಾಡಿ ಶ್ಲಾಘಿಸಿದ್ದಾರೆ.
ಅನುದಾನದ ವಿವರ: ಹಾರುಗೇರಿ ಮತ್ತು ಮುಗಳಖೋಡ ₹51.94 ಕೋಟಿ, ಚನ್ನಮ್ಮ ಕಿತ್ತೂರ ₹25.21 ಕೋಟಿ, ಎಂ.ಕೆ. ಹುಬ್ಬಳ್ಳಿ ₹18.09 ಕೋಟಿ, ಹುಕ್ಕೇರಿ ₹9.63 ಕೋಟಿ, ಚಿಂಚಲಿ ₹23.90 ಕೋಟಿ, ರಾಯಬಾಗ ₹22.83 ಕೋಟಿ, ಖಾನಾಪುರ ₹20.52 ಕೋಟಿ, ಐನಾಪುರ ₹14.13 ಕೊಟಿ, ಯಕ್ಸಂಬಾ ₹16.36 ಕೋಟಿ, ಅಥಣಿ ₹47.67 ಕೋಟಿ, ಕಂಕಣವಾಡಿ ₹14.83 ಕೋಟಿ, ಕುಡಚಿ ₹18.62 ಕೋಟಿ, ಸಂಕೇಶ್ವರ ₹11.74 ಕೋಟಿ, ಮುನವಳ್ಳಿ ₹39.11 ಕೋಟಿ, ಅಂಕಲಗಿ–ಅಕ್ಕತಂಗೇರಹಾಳ ₹42.26 ಕೋಟಿ, ಬೋರಗಾಂವ₹19.98 ಕೋಟಿ, ಘಟಪ್ರಭಾ, ಕಲ್ಲೋಳಿ, ನಾಗನೂರ, ಮೂಡಲಗಿ ₹165.44 ಕೋಟಿ, ಕಾಗವಾಡ, ಶೇಬಾಳ, ಉಗಾರ ಖುರ್ದ ₹66.74 ಕೋಟಿ, ಕಬ್ಬೂರ ₹22.25 ಕೋಟಿ, ರಾಮದುರ್ಗ ₹19.56 ಕೋಟಿ, ಯರಗಟ್ಟಿ ₹29.14 ಕೋಟಿ, ಕೊಣ್ಣೂರ ₹19.67 ಕೋಟಿ, ನಿಪ್ಪಾಣಿ ₹32.83 ಕೊಟಿ, ಮಚ್ಛೆ, ಪೀರನವಾಡಿ ₹85 ಕೋಟಿ ಮಂಜೂರಾಗಿರುವ ಹಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.