ADVERTISEMENT

ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುವೆ: ಮಂಗಲಾ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 20:30 IST
Last Updated 25 ಮಾರ್ಚ್ 2021, 20:30 IST
ಮಂಗಲಾ
ಮಂಗಲಾ   

ಬೆಳಗಾವಿ: 'ನನಗೆಟಿಕೆಟ್ ನೀಡಿದ ಪಕ್ಷದ ಹೈಕಮಾಂಡ್, ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ಟಿಕೆಟ್ ವಿಚಾರದ ಕುರಿತು ಇನ್ನೂ ಯಾವ ನಾಯಕರೂ ನನಗೆ ಕರೆ ಮಾಡಿಲ್ಲ. ಸುರೇಶ ಅಂಗಡಿ ಅವರಂತೆ ಕೆಲಸ ಮಾಡಲು ದೇವರು ಶಕ್ತಿ ನೀಡಲಿ. ಅವರಷ್ಟು ಆಗದಿದ್ದರೂ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸುತ್ತೇನೆ' ಎಂದು ಭಾವುಕರಾಗಿ ಹೇಳಿದರು.

'ಅಂಗಡಿಯವರು ಎಲ್ಲಾ ಕೆಲಸ ಮಾಡಿದ್ದಾರೆ. ಅವಕಾಶ ಸಿಕ್ಕರೆ ಬಾಕಿ ಸಿಕ್ಕ ಕೆಲಸ ಮಾಡುತ್ತೇನೆ. ಅವರು ಇಲ್ಲವೆಂದು ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುವುದಕ್ಕೆ ಬಹಳ ಬೇಜಾರಿದೆ. ಒಂದು ಕಡೆ ಸಂತೋಷ. ಮತ್ತೊಂದು ಕಡೆ ದುಃಖ ಆಗುತ್ತಿದೆ. ಅವರನ್ನ ಕಳೆದುಕೊಂಡು ನಾನು ಹೇಗಿರಬೇಕು?' ಎಂದು ಕಣ್ಣೀರಿಟ್ಟರು.

ADVERTISEMENT

'ನಾವು ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಿ ಎಂದು ಕೇಳಿದ್ದೆವು. ಇಂಥವರಿಗೇ ಕೊಡಬೇಕು ಎಂದು ಏನಿರಲಿಲ್ಲ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದೆವು. ನಮ್ಮ ತಾಯಿಗೆ ಅವಕಾಶ ನೀಡಿದ್ದಕ್ಕೆ ಕೇಂದ್ರ, ರಾಜ್ಯದ ನಾಯಕರಿಗೆ ವಂದನೆ ಸಲ್ಲಿಸುತ್ತೇವೆ' ಎಂದು ಪುತ್ರಿ ಶ್ರದ್ಧಾ ಶೆಟ್ಟರ್ ಹೇಳಿದರು.

'ನಮ್ಮ ತಂದೆ ಮಾಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಇವೆ. ಎದುರಾಳಿ ಯಾರೇ ನಿಂತರೂ ಅದನ್ನು ನಿಭಾಯಿಸಲು ತಯಾರಿದ್ದೇವೆ. ಸ್ಥಳೀಯ ನಾಯಕರೆಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ. ಮತದಾರರು ನಮ್ಮ ತಂದೆ, ಕುಟುಂಬದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಜನರ ಜೊತೆ ನಾವು ಮುಂದೆಯೂ ಇರುತ್ತೇವೆ. ಅವರ ಸಣ್ಣ ಆಪೇಕ್ಷೆಯನ್ನೂ ಪೂರ್ಣಗೊಳಿಸುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.