ADVERTISEMENT

ಬೆಳಗಾವಿ| ಮತ್ತೊಬ್ಬರಿಗೆ ಕೋವಿಡ್‌–19 ಸೋಂಕು; ಬಾಧಿತರ ಸಂಖ್ಯೆ 73ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 7:31 IST
Last Updated 2 ಮೇ 2020, 7:31 IST
   

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿಯ 23 ವರ್ಷ ವಯಸ್ಸಿನ ಯುವಕನೊಬ್ಬನಲ್ಲಿ ಕೋವಿಡ್‌–19 ಸೋಂಕು ಶನಿವಾರ ದೃಢಪಟ್ಟಿದ್ದು, ಇದುವರೆಗೆ ಜಿಲ್ಲೆಯಲ್ಲಿ ಮಾರಕ ಕೊರೊನಾ ಸೋಂಕಿಗೆ ಬಾಧಿತರಾದವರ ಸಂಖ್ಯೆ 73ಕ್ಕೆ ಏರಿದೆ.

ನವದೆಹಲಿಯ ತಬ್ಲೀಗಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಗ್ರಾಮಕ್ಕೆ ವಾಪಸ್ಸಾಗಿದ್ದ ಪಿ–128 ಜೊತೆ ಇವರು ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT