ADVERTISEMENT

VIDEO | ಗಾಂಧಿ ಭಾರತ ಸಮಾವೇಶ: ಬೆಳಗಾವಿಯಲ್ಲಿ ಬೆಳಕಿನ ಮೆರವಣಿಗೆ!

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 11:21 IST
Last Updated 26 ಡಿಸೆಂಬರ್ 2024, 11:21 IST

ಬೆಳಗಾವಿಯಲ್ಲೀಗ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ್ದೇ ವೈಭವ. ಈ ಐತಿಹಾಸಿಕ ಉತ್ಸವಕ್ಕಾಗಿ ಕುಂದಾನಗರಿ ಗಾಂಧಿಮಯವಾಗಿದೆ. ₹8 ಕೋಟಿ ವೆಚ್ಚದಲ್ಲಿ ವಿದ್ಯುದ್ದೀಪಾಲಂಕಾರ ಮಾಡಿದ್ದು, ಇಡೀ ನಗರಕ್ಕೆ ಹೊಸ ರಂಗು ತುಂಬಿದೆ. ದೀಪಾಲಂಕಾರ ನೋಡಲು ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಬೆಳಗಾವಿಯಲ್ಲಿ ಮೈಸೂರು ದಸರೆಯ ಸಡಗರವೇ ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಚಿಣ್ಣರಂತೂ ಜಗಮಗಿಸುವ ದೀಪಗಳ ಮುಂದೆ ನಿಂತು ಕುಣಿದು ಕುಪ್ಪಳಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.