ADVERTISEMENT

ಬೆಳಗಾವಿ ವಿಭಜನೆ ಸರ್ಕಾರದ ನಿರ್ಣಯ ಅಂತಿಮ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 19:31 IST
Last Updated 8 ಜುಲೈ 2025, 19:31 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆಗೆ ಹಲವು ಬೇಡಿಕೆಗಳಿವೆ. ವಿಭಜನೆಯನ್ನು ನಾವು ಬಯಸಿದ್ದೇವೆ. ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಬೇಕು’ ಎಂದು ಸಚಿವ ಸತೀಶ ಜಾರಕಿಹೊಳಿ ಇಲ್ಲಿ  ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಥಣಿಯವರು ತಮ್ಮನ್ನು ವಿಜಯಪುರಕ್ಕೆ, ರಾಮದುರ್ಗದವರು ಬಾಗಲಕೋಟೆಗೆ ಮತ್ತು ಸವದತ್ತಿಯವರು ಧಾರವಾಡಕ್ಕೆ ಸೇರಿಸಿ ಎನ್ನುತ್ತಾರೆ. ಎಲ್ಲರಿಗೂ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಈಗ ಜಿಲ್ಲಾ ವಿಭಜನೆ ಬಗ್ಗೆ ಮಾತನಾಡುವ ಬಿಜೆಪಿಯವರು, ಅಧಿಕಾರದಲ್ಲಿದ್ದಾಗ ಏಕೆ ನಿರ್ಧರಿಸಲಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT