
ಬೆಳಗಾವಿ: ‘ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಖಾಸಗಿ ಗಾರ್ಡ್‌ನಲ್ಲಿ ಶನಿವಾರ ಆಯೋಜಿಸಲಾದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಗುತ್ತಿಗೆದಾರರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದು ಸರ್ಕಾರದ ಕರ್ತವ್ಯವಾಗಿದೆ. ಸುಮಾರು 100 ವರ್ಷಗಳ ಬ್ರಿಟಿಷ್ ಕಾಲದ ಹಳೆದಾದ ರಾಜ್ಯ ವಿದ್ಯುತ ಸಂಸ್ಥೆ ಇದಾಗಿದೆ. ಹೀಗಾಗಿ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಜಂಟಿ ಸಭೆ ನಡೆಸಿ ಪರಿಹರಿಸಲಾಗುವುದು. ರಾಜ್ಯದಲ್ಲಿ 30 ಸಾವಿರ ಸದಸ್ಯರನ್ನು ಹೊಂದಿರುವ ಸಂಸ್ಥೆ ಇದು, ಸದ್ಯ ಪದಾಧಿಕಾರಿಗಳು ಆಯ್ಕೆಯಾಗಿದೆ ಸಂಸ್ಥೆ ಏಳಿಗೆಗೆ ಎಲ್ಲರೂ ಶ್ರಮಿಸಬೇಕು ಸರ್ಕಾರ ನಿಮ್ಮ ಜೊತೆಗೆ ಇರಲಿದೆ’ ಎಂದು ಭರವಸೆ ನೀಡಿದರು.
‘ಬೆಂಗಳೂರಿನಲ್ಲಿ ಕಚೇರಿ ಇದೆ. ಅದೇ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘಗಳ ಕಚೇರಿಗಳು ನಿರ್ಮಾಣವಾಗಬೇಕು.ಅಂದಾಗ ಮಾತ್ರ ಗುತ್ತಿಗೆದಾರರ ಸಮಸ್ಯೆಯನ್ನು ಆಲಿಸಲು ಅನುಕೂಲವಾಗಲಿದೆ. ನಿಮ್ಮ ರಕ್ಷಣೆ ಮಾಡುವುದೇ ಸರ್ಕಾರ ಆದ್ಯ ಕರ್ತವ್ಯವಾಗಿದೆ. ನೂತನ ಅಧ್ಯಕ್ಷರ ಆಡಳಿತ ಅವಧಿಯಲ್ಲಿ ಪರಿಹಾರ ಜೊತೆಗೆ ಸಂಘ ಉತ್ತಮ ರೀತಿಯಲ್ಲಿ ನಡೆಯಲಿ, ಸಂಘದ ಸಮಸ್ಯೆಗಳು ಪೂರಕವಾಗಿ ಕೆಲಸ ಮಾಡಬೇಕಿದೆ’ ಎಂದರು.
ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಬಾಬು ಮಾತನಾಡಿ, ‘ಬೆಸ್ಕಾಂ ನಗರ ವ್ಯಾಪ್ತಿಯ ಕಚೇರಿಗಳಲ್ಲಿ ನೆಟವರ್ಕ್ ಸಮಸ್ಯೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಐಡಿಯಾ ಇನ್ಫಿನಿಟಿ ನೆಟ್ವರ್ಕ್ ಇಲ್ಲದಿರುವ ಬಗ್ಗೆ, ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿರುವುದು, ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕ ಹೆಚ್ಚಳ, ಅನುಭವದ ಆಧಾರದ ಮೇಲೆ ದ್ವಿತೀಯ ದರ್ಜೆ ಗುತ್ತಿಗೆದಾರರಿಗೆ ಪ್ರಥಮ ದರ್ಜೆ ಪರವಾನಗಿ ನೀಡುಬೇಕಿದೆ’ ಎಂದು ಮನವಿ ಮಾಡಿಕೊಂಡರು.
ಸಂಘದ ಮುಖಂಡರಾದ ಹರೀಶ ಪಾಟೀಲ, ರಾಜ್ಯ ವಿದ್ಯುತ್ ಗುತ್ತಿಗೆದಾರ ರಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇತರರು ಇದ್ದರು.
ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ನಿಯೋಗದೊಂದಿಗೆ ಇಂಧನ ಸಚಿವ ಕೆ.ಜೆ. ಜಾರ್ಚ್ ಭೇಟಿ ಮಾಡಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುವುದುಸತೀಶ ಜಾರಕಿಹೊಳಿ, ಸಚಿವ ಲೋಕೋಪಯೋಗಿ ಇಲಾಖೆ
ಅಕ್ರಮವಾಗಿ ಪಡೆದಿರುವ ಕೃಷಿ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ಅಪಘಾತ ಮರಣ ಹೊಂದಿದ ವಿದ್ಯುತ್ ಕಾರ್ಮಿಕರಿಗೆ ಎಸ್ಕಾಂಗಳಿಂದ ಪರಿಹಾರ ನೀಡಬೇಕುಚಂದ್ರಬಾಬು ಅಧ್ಯಕ್ಷ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.