
ಪ್ರಜಾವಾಣಿ ವಾರ್ತೆಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಳಗಾವಿ: ಸ್ವಾದೀನ ಮಾಡಿಕೊಂಡಿದ್ದ ಜಮೀನಿಗೆ ಪರಿಹಾರದ ಚೆಕ್ ನೀಡಲು ₹1 ಲಕ್ಷ ಲಂಚ ಕೇಳಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಶಿರೂರ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಮುಗಳಕೋಡ ಮತ್ತು ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ರಾಯಬಾಗ ತಾಲ್ಲೂಕಿನ ಖೇಮಲಾಪುರ ಗ್ರಾಮದ ರೈತ ಯಾಸಿನ್ ಪೇಂಢಾರಿ ಎಂಬುವರು 14 ಗುಂಟೆ ಜಮೀನು ಸ್ವಾದೀನ ಮಾಡಿಕೊಳ್ಳಲಾಗಿತ್ತು. ಪರಿಹಾರವಾಗಿ ಸರ್ಕಾರದಿಂದ ₹18 ಲಕ್ಷ ಮಂಜೂರಾಗಿತ್ತು. ಇದರ ಚೆಕ್ ನೀಡಲು ಅಶೋಕ ಅವರು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ಬಗ್ಗೆ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.