
ಪ್ರಜಾವಾಣಿ ವಾರ್ತೆಬೆಳಗಾವಿ: ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದಲ್ಲಿ, ಕೋವಿಡ್–19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ 60 ಬಡ ಚರ್ಮ ಕುಶಲಕರ್ಮಿಗಳ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.
ಇಲ್ಲಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಕಿಟ್ ನೀಡಲಾಯಿತು.
ಇದೇ ವೇಳೆ, ಚಂದರಗಿ ಅವರನ್ನು ಕರ್ನಾಟಕ ಲೆದರ್ ಆರ್ಟಿಸನ್ ಆಸೋಸಿಯೇಷನ್ ಸನ್ಮಾನಿಸಲಾಯಿತು. ಮುಖಂಡರಾದ ಪರಶುರಾಮ ಬಾಹು ನಂದಿಹಳ್ಳಿ, ಮಲ್ಲೇಶ ಚೌಗಲೆ, ಸಂಘದ ಅಧ್ಯಕ್ಷರಾದ ಸಂತೋಷ ಹೊಂಗಲ, ಕಾರ್ಯದರ್ಶಿಗಳಾದ ಶಿವರಾಜ ಭೂಪಾಲ ಸೌದಾಗರ ಹಾಗೂ ಸದಸ್ಯರಾದ ಸಿದ್ದಾರೂಢ ಬನ್ನಿಗಿಡದ, ಗಣೇಶ ಕಾಳೆ, ಶಿವಾಜಿ ಪವಾರ, ಸಂಜಯ ಚೌಗಲೆ, ಸಂತೋಷ ಹೊನಕಾಂಡೆ, ತುಕಾರಾಮ ಶಿಂಧೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.