ADVERTISEMENT

ಬೆಳಗಾವಿ: ಸಂಭ್ರಮದಿಂದ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:30 IST
Last Updated 17 ಆಗಸ್ಟ್ 2025, 4:30 IST
ಬೆಳಗಾವಿಯ ಟಿಳಕವಾಡಿಯ ಶುಕ್ರವಾರ ಪೇಟೆಯ ಇಸ್ಕಾನ್‌ ಮಂದಿರದಲ್ಲಿ ವೈವಿಧ್ಯಮಯ ಪುಷ್ಪಗಳಿಂದ ಕೃಷ್ಣ–ರಾಧೆಯನ್ನು ವರ್ಣರಂಜಿತವಾಗಿ ಅಲಂಕರಿಸಿದ್ದು ಭಕ್ತರನ್ನು ಸೆಳೆಯಿತು
ಬೆಳಗಾವಿಯ ಟಿಳಕವಾಡಿಯ ಶುಕ್ರವಾರ ಪೇಟೆಯ ಇಸ್ಕಾನ್‌ ಮಂದಿರದಲ್ಲಿ ವೈವಿಧ್ಯಮಯ ಪುಷ್ಪಗಳಿಂದ ಕೃಷ್ಣ–ರಾಧೆಯನ್ನು ವರ್ಣರಂಜಿತವಾಗಿ ಅಲಂಕರಿಸಿದ್ದು ಭಕ್ತರನ್ನು ಸೆಳೆಯಿತು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಂಭ್ರಮದಿಂದ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಯಿತು.

ಇಲ್ಲಿನ ಟಿಳಕವಾಡಿಯ ಶುಕ್ರವಾರ ಪೇಟೆಯ ಇಸ್ಕಾನ್‌ ಮಂದಿರದಲ್ಲಿ ಭಕ್ತಿರಸಾಮೃತ ಸ್ವಾಮಿ ಮಹಾರಾಜರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಕೃಷ್ಣ–ರಾಧೆ ದರ್ಶನ ಪಡೆದರು. ವೈವಿಧ್ಯಮಯ ಪುಷ್ಪಗಳಿಂದ ಕೃಷ್ಣ–ರಾಧೆಯನ್ನು ವರ್ಣರಂಜಿತವಾಗಿ ಅಲಂಕರಿಸಿದ್ದು ಭಕ್ತರನ್ನು ಸೆಳೆಯಿತು.

ಆರ್‌ಪಿಡಿ ಕಾಲೇಜು ಎದುರಿನ ಕೃಷ್ಣಮಠದಲ್ಲಿ ಸಡಗರದಿಂದ ಕೃಷ್ಣಜನ್ಮಾಷ್ಟಮಿ ಆಚರಿಸಿ, ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಘು ವಿಜಯತೀರ್ಥ ಸ್ವಾಮಿಗಳಿಂದ ಲಕ್ಷ ತುಳಸಿ ಅರ್ಚನೆ ನೆರವೇರಿತು. ವಿವಿಧ ಭಜನೆ ಮಂಡಳಿಯವರು ಹರಿಭಜನೆ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ADVERTISEMENT

ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಕ್ಕಳು ಕೃಷ್ಣ–ರಾಧೆ ವೇಷದಲ್ಲಿ ಕಣ್ಮನಸೆಳೆದರು.

ಬೆಳಗಾವಿಯ ಆರ್‌ಪಿಡಿ ಕಾಲೇಜು ಎದುರಿನ ಕೃಷ್ಣಮಠದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.