ADVERTISEMENT

ಬೆಳಗಾವಿ: ಮಟ್ಕಾ; ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:48 IST
Last Updated 28 ಫೆಬ್ರುವರಿ 2026, 2:48 IST
<div class="paragraphs"><p>ಬಂಧನ</p></div>

ಬಂಧನ

   

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಬೆಲ್ದಾರ ಚಾವಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುರುವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಒಬ್ಬನನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಮದ ವಿನಾಯಕ ಮಾದರ ಬಂಧಿತ.

===

ADVERTISEMENT

ಗಾಂಜಾ ಸೇವನೆ: ಮೂವರ ಬಂಧನ

ಬೆಳಗಾವಿ: ಇಲ್ಲಿನ ಶಹಾಪುರದ ಜೋಶಿ ಗಲ್ಲಿಯಲ್ಲಿ ಗುರುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಪೀರನವಾಡಿಯ ಅಲ್ತಮಶ್‌ ಪಠಾಣ, ಹುಂಚ್ಯಾನಟ್ಟಿಯ ಶಹಾಬುದ್ದೀನ್‌ ಸುಬೇದಾರ, ನಗರದ ಖಾಸಬಾಗದ ದಿಶಾನ್‌ ಬಿಜಾಪುರೆ ಬಂಧಿತರು.

===

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ:

20 ಮಂದಿ ಬಂಧನ

ಬೆಳಗಾವಿ: ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಗುರುವಾರ ಮದ್ಯ ಸೇವನೆಗೆ ಸಂಬಂಧಿಸಿ, 17 ಪ್ರತ್ಯೇಕ ಪ್ರಕರಣಗಳಲ್ಲಿ 20 ಮಂದಿ ಬಂಧಿಸಲಾಗಿದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮದ್ಯ ಸೇವಿಸಿ, ಸ್ಥಳೀಯರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಹಿಳೆಯರು ಅನೇಕ ಸಭೆಗಳಲ್ಲಿ ದೂರು ನೀಡಿದ್ದರು. ಹಾಗಾಗಿ  ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಮೂಡಿಸುವ ಮತ್ತು ಜವಾಬ್ದಾರಿ ಹೆಚ್ಚಿಸುವ ಪ್ರಯತ್ನವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ತಿಳಿಸಿದ್ದಾರೆ.
****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.