ADVERTISEMENT

ಬೈಲಹೊಂಗಲ: ಬಸವಸಿದ್ಧಲಿಂಗ ಸ್ವಾಮೀಜಿ ಶವ ಮುಟ್ಟದಂತೆ ತಡೆದ ಮಹಿಳೆಯರು

ಆಡಿಯೊ ಹರಿಬಿಟ್ಟ ಮಹಿಳೆಯರನ್ನು ಬಂಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 7:32 IST
Last Updated 5 ಸೆಪ್ಟೆಂಬರ್ 2022, 7:32 IST
ನೇಗಿನಹಾಳ ಮಠದಲ್ಲಿ ಧರಣಿ ಕುಳಿತ ಮಹಿಳೆಯರು
ನೇಗಿನಹಾಳ ಮಠದಲ್ಲಿ ಧರಣಿ ಕುಳಿತ ಮಹಿಳೆಯರು   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಬಸವಸಿದ್ಧಲಿಂಗ ಸ್ವಾಮೀಜಿ ಶವ ಮುಟ್ಟದಂತೆ ಪೊಲೀಸರನ್ನು ಹಲವು ಮಹಿಳೆಯರು ತಡೆಡಿದ್ದಾರೆ.

‘ಮಹಿಳೆಯರಿಬ್ಬರು ಈಚೆಗೆ ಸ್ವಾಮೀಜಿಗಳ ಲೈಂಗಿಕ ಸಂಬಂಧ ಕುರಿತು ಮಾತನಾಡಿರುವ ಆಡಿಯೊ ಹರಿಬಿಡಲಾಗಿತ್ತು. ಅವರು ಮಾಡಿದ ಆರೋಪದಿಂದ ಮನನೊಂದು ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಶ್ರೀಗಳು ಪ್ರಾಣಬಿಟ್ಟಿದ್ದಾರೆ. ಇದಕ್ಕೆ ಕಾರಣವಾದ ಮಹಿಳೆಯರನ್ನು ಬಂಧಿಸುವವರೆಗೆ ಸ್ವಾಮೀಜಿ ಶವ ಮುಟ್ಟಲು ಬಿಡುವುದಿಲ್ಲ’ ಎಂದು ಗ್ರಾಮದ ಮಹಿಳೆಯರು ಪಟ್ಟುಹಿಡಿದಿದ್ದಾರೆ.

ಶ್ರೀಗಳ ಶವ ಇನ್ನೂ ಅವರು ಮಲಗುವ ಕೋಣೆಯಲ್ಲಿಯೆ ಇದೆ. ಬಾಗಿಲ ಮುಂದೆ ಧರಣಿ ಕುಳಿತ ಹಲವು ಮಹಿಳೆಯರು ಒಳಹೋಗದಂತೆ ಪೊಲೀಸರನ್ನು ಅಡ್ಡಗಟ್ಟಿದ್ದಾರೆ.

ADVERTISEMENT

ಬೆಳಗಾವಿ ಹಾಗೂ ಗಂಗಾವತಿಯ ಆ ಇಬ್ಬರೂ ಮಹಿಳೆಯರು ಮನಬಂದಂತೆ ಮಾತಾಡಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ರಾಜ್ಯದ ಪೀಠಾಧಿಪತಿಗಳನ್ನೂ ನಿಂದಿಸಿದ್ದಾರೆ. ‘ಎಲ್ಲರೂ ಲಫಂಗರು’ ಎಂಬ ಪದ ಬಳಸಿದ್ದಾರೆ. ಆಡಿಯೊದಲ್ಲಿ ನೇಗಿನಹಾಳ ಶ್ರೀಗಳ ಹೆಸರನ್ನೂ ಬಳಸಿದ್ದಾರೆ. ಅದೇ ಕಾರಣಕ್ಕೆ ಶ್ರೀಗಳು ಮನನೊಂದು ನೇಣಿಗೆ ಶರಣಾಗಿದ್ದಾರೆ. ಈ ಸಾವಿಗೆ ಆಡಿಯೊ ಹರಿಬಿಟ್ಟ ಮಹಿಳೆಯರೇ ಕಾರಣ. ಅವರನ್ನು ಬಂಧಿಸಿದ ನಂತರವೇ ಸ್ವಾಮೀಜಿ ಪಾರ್ಥಿವ ಶರೀರ ಮುಟ್ಟಲು ಬಿಡುತ್ತೇವೆ’ ಎಂದೂ ಮಹಿಳೆಯರು ಪಟ್ಟು ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.