
ಬೆಳಗಾವಿ: ನಗರದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರು ಹಾಗೂ ಮಾರಕಾಸ್ತ್ರ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಲ್ಲಿನ ಶಾಸ್ತ್ರಿ ನಗರದ ಉತ್ಕರ್ಷ ವರ್ಮಾ (24), ಘೀ ಗಲ್ಲಿಯ ರಿಯಾಜ ಅಬ್ದುಲ್ ರೆಹಮಾನ್ ಘೀವಾಲೆ (46) ಹಾಗೂ ಕಂಗ್ರಾಳ ಗಲ್ಲಿಯ ಅಶೋಕ ಬಾಬು ಜಾಧವ (58) ಬಂಧಿತರು.
ಬೆಳಗಾವಿಯ ಪಾಟೀಲಮಾಳ ಗಲ್ಲಿಯಲ್ಲಿ ಗಾಂಜಾ ಸೇವಿಸಿದ್ದ ಉತ್ಕರ್ಷನನ್ನು ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಂಜಾರಗಲ್ಲಿಯಲ್ಲಿ ರಿಯಾಜ ಘೀವಾಲೇ ಹಾಗೂ ಅಶೋಕ ಜಾಧವನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡು ಅಶೋಕ ನಗರದ ಹೆದ್ದಾರಿ ಅಂಡರ್ ಪಾಸ್ ಬಳಿ ತಿರುಗಾಡುತ್ತಿದ್ದ ಬೆಳಗಾವಿಯ ಸುಭಾಷ್ ನಗರದ ಫಾರಿಕ ರೆಹಮಾನ್ ಚಜ್ಜು (35) ಎಂಬ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದು, ತಲವಾರ್ ವಶಕ್ಕೆ ಪಡೆದಿದ್ದಾರೆ.
ಮನೆ ಕಳ್ಳತನ: ಇಬ್ಬರ ಬಂಧನ
ಕಾಗವಾಡ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಗವಾಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಉಗಾರ ಖುರ್ದ್ ಗ್ರಾಮದ ಯಾಸೀನ್ ಸುತಾರ ಜಮೀರ್ ಜಮಾದಾರ ಬಂಧಿತರು. ಅವರಿಂದ ₹19.58 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ತಮ್ಮ ಮನೆ ಕಳ್ಳತನವಾಗಿದೆ ಎಂದು ಉಗಾರ ಖುರ್ದ್‌ನ ಜಿನ್ನಪ್ಪ ಮಾಕನ್ನವರ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.