ADVERTISEMENT

ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 2:18 IST
Last Updated 7 ನವೆಂಬರ್ 2025, 2:18 IST
<div class="paragraphs"><p>ಶುಭಂ ಶೆಳಕೆ ಜತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಷಣ</p></div>

ಶುಭಂ ಶೆಳಕೆ ಜತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಷಣ

   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ದಿನವೇ ಕರಾಳ ದಿನ ಆಚರಿಸಿದ ಎಂಇಎಸ್‌ ಮುಖಂಡ ಶುಭಂ ಶೆಳಕೆ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಲ್ಲಿನ ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಸಿಪಿಐ ಬಿ.ಆರ್.ಗಡೇಕರ್ ಅವರನ್ನು ನೇಮಕ ಮಾಡಲಾಗಿದೆ.

ಸರ್ಕಾರ ಗುರುವಾರ ವರ್ಗಾವಣೆ ಮಾಡಿರುವ 120 ಇನ್‌ಸ್ಪೆಕ್ಟರ್‌ಗಳ ಪಟ್ಟಿಯಲ್ಲಿ ಕಾಲಿಮಿರ್ಚಿ ಅವರ ಹೆಸರನ್ನೂ ಸೇರಿಸಲಾಗಿದೆ. ನಾಡವಿರೋಧಿ, ರೌಡಿಶೀಟರ್‌ ಆದ ಶೆಳಕೆ ಜತೆಗೆ ಸೆಲ್ಫಿ ತೆಗೆದುಕೊಂಡ ಅವರನ್ನು ವರ್ಗಾವಣೆ ಮಾಡಬೇಕು ಎಂದು ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.