ADVERTISEMENT

ಬೆಳಗಾವಿ ಲೋಕಸಭಾ | ವಿವಿಧ ಬಡಾವಣೆಗಳಲ್ಲಿ ಮೃಣಾಲ್‌ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:26 IST
Last Updated 26 ಏಪ್ರಿಲ್ 2024, 15:26 IST
ಬೆಳಗಾವಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪ್ರಚಾರ ಕೈಗೊಂಡರು
ಬೆಳಗಾವಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪ್ರಚಾರ ಕೈಗೊಂಡರು   

ಬೆಳಗಾವಿ: ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಶಿವಾಜಿ ರಸ್ತೆ, ಮುಜಾವರ ಗಲ್ಲಿ, ಪಾಟೀಲ ಮಾಳ, ಭಾಂಧುರ್ ಗಲ್ಲಿ, ತಹಶೀಲ್ದಾರ್‌ ಗಲ್ಲಿ, ಫುಲಬಾಗ್ ಗಲ್ಲಿ, ಪಾಟೀಲ ಗಲ್ಲಿ, ಮಠ ಗಲ್ಲಿ, ಭಾತಖಾಂಡೆ ಗಲ್ಲಿ ಮತ್ತಿತರ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಗುರುವಾರ ಮತಯಾಚಿಸಿದರು.

‘ಸ್ಥಳೀಯ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತ ನೀಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಸ್ವಾಭಿಮಾನ ಮುಖ್ಯ. ನಾವು ನಮ್ಮೂರಿನ ಉಮೇದುವಾರನನ್ನೇ ಬೆಂಬಲಿಸುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಇದರಿಂದಾಗಿ ನನ್ನ ಉತ್ಸಾಹ, ವಿಶ್ವಾಸ ಇಮ್ಮಡಿಯಾಗಿದೆ’ ಎಂದು ಅವರು ತಿಳಿಸಿದರು. ಹಲವು ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT