
ಪ್ರಜಾವಾಣಿ ವಾರ್ತೆ
ಬಂಧನ (ಸಾಂದರ್ಭಿಕ ಚಿತ್ರ)
ಬೆಳಗಾವಿ: ಇಲ್ಲಿನ ವಡಗಾವಿಯ ಸರ್ಕಾರಿ ಶಾಲೆ ಬಳಿ ಭಾನುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಡಗಾವಿಯ ಚೇತನ ಕಾರ್ಲೇಕರ, ಪ್ರವೀಣ ನಾಯಿಕ, ಸೂರಜ್ ಅಣ್ವೇಕರ ಬಂಧಿತರು.
ಸಾರಾಯಿ ಮಾರಾಟ: ಒಬ್ಬನ ಬಂಧನ
ಬೆಳಗಾವಿ: ತಾಲ್ಲೂಕಿನ ಚಂದೂರಿನಲ್ಲಿ ಭಾನುವಾರ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಅದೇ ಗ್ರಾಮದ ಮಂಜುನಾಥ ಕಾಶಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹3 ಸಾವಿರ ಮೌಲ್ಯದ ಸಾರಾಯಿ, ₹130 ನಗದು ವಶಕ್ಕೆ ಪಡೆಯಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.