ADVERTISEMENT

ಬೆಳಗಾವಿ: ‘ಭೇಡ್‌ ಚಾಲ್‌’ ಸಾಕ್ಷ್ಯಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 4:17 IST
Last Updated 23 ನವೆಂಬರ್ 2025, 4:17 IST
<div class="paragraphs"><p>ಬೆಳಗಾವಿಯಲ್ಲಿ ಶನಿವಾರ ನಡೆದ ‘ಭೇಡ್ ಚಾಲ್ (ಹರ್ಡ್ ವಾಕ್)’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕುರುಬ ಸಮುದಾಯದ ಸ್ಥಿತಿಗತಿಗಳ ಕುರಿತು ಚಿಂತನ– ಮಂಥನ ಕಾರ್ಯಕ್ರಮದಲ್ಲಿ ನೀಲಕಂಠ ಮಾಮಾ ಕುರುಬರ ಮಾತನಾಡಿದರು</p></div>

ಬೆಳಗಾವಿಯಲ್ಲಿ ಶನಿವಾರ ನಡೆದ ‘ಭೇಡ್ ಚಾಲ್ (ಹರ್ಡ್ ವಾಕ್)’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕುರುಬ ಸಮುದಾಯದ ಸ್ಥಿತಿಗತಿಗಳ ಕುರಿತು ಚಿಂತನ– ಮಂಥನ ಕಾರ್ಯಕ್ರಮದಲ್ಲಿ ನೀಲಕಂಠ ಮಾಮಾ ಕುರುಬರ ಮಾತನಾಡಿದರು

   

ಬೆಳಗಾವಿ: ಶಿಕ್ಷಣತಜ್ಞ ಅಂಕಿತ್ ಪೊಗುಲಾ ಮತ್ತು ಯುಎಸ್ಎ ಮೂಲದ ಹರ್ಷ್ ಸತ್ಯ ಅವರ ‘ಭೇಡ್ ಚಾಲ್ (ಹರ್ಡ್ ವಾಕ್)’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕುರುಬ ಸಮುದಾಯದ ಸ್ಥಿತಿಗತಿಗಳ ಕುರಿತು ಚಿಂತನ– ಮಂಥನ ಕಾರ್ಯಕ್ರಮ, ಇಲ್ಲಿನ ಉದ್ಯಮಭಾಗದ ಫೌಂಡ್ರಿ ಕ್ಲಸ್ಟರ್‌ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಈ ಸಾಕ್ಷ್ಯಚಿತ್ರವು ಡೋಕುಬಾಕು ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಇದನ್ನು ಗ್ರೀನ್ ಆಸ್ಕರ್‌ಗೆ ಕೂಡ ಆಯ್ಕೆ ಮಾಡಲಾಗಿದೆ. ಇದನ್ನು ಚಿತ್ರೀಕರಣ ಮಾಡಿದ ಚಚಡಿ, ಕಡೋಲಿ, ಉಚಗಾಂವ್ ಮತ್ತು ಅಮ್ದಾಪುರದ ಗ್ರಾಮದ ನಿವಾಸಿಗಳು ಹಾಗೂ ಕುರುಬ ಸಮಾಜದವರಿಗಾಗಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು.

ADVERTISEMENT

ಸಮುದಾಯದ ಆಧ್ಯಾತ್ಮಿಕ ಚಿಂತಕರಾದ ನೀಲಕಂಠ ಮಾಮಾ ಕುರುಬರ ಮಾತನಾಡಿ, ‘ಸ್ವಾತಂತ್ರ್ಯದ ಮೊದಲು ಕರ್ನಾಟಕದಲ್ಲಿ 4 ಕೋಟಿ ಕುರಿ ಮತ್ತು ಮೇಕೆಗಳು ಇದ್ದವು. ಈಗ 1.4 ಕೋಟಿಗೆ ಇಳಿದಿದೆ. ಇದು ಕೇವಲ ಉದ್ಯೋಗ ನಷ್ಟ ಅಥವಾ ಒಂದು ಸಮುದಾಯಕ್ಕೆ ವೃತ್ತಿಪರ ಪ್ರವೃತ್ತಿಗಳಲ್ಲಿನ ಬದಲಾವಣೆಯ ಬಗ್ಗೆ ಅಲ್ಲ. ಕುರುಬನ ಕೆಲಸ ಕೇವಲ ಹಣಕ್ಕಾಗಿ ಮಾಡಲಾಗುವುದಿಲ್ಲ. ಇದು ಮಣ್ಣು ಮತ್ತು ನೀರು, ಪ್ರಾಣಿಗಳು ಮತ್ತು ಮನುಷ್ಯನ ನೈಸರ್ಗಿಕ ಶಕ್ತಿಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ಮಾರ್ಗವಾಗಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹಿರಿಯರಾದ ವಜೀರ್ ದೇಮನ್ನನ್ವರ್, ನಾಯಕ ಬಾಬು ಸಾಂಬ್ರೇಕರ್, ರೆವರೆಂಡ್ ಫಾದರ್ ಜೋ ಚಣಕಲಾ ಮತ್ತು ಜಿ.ಎನ್. ಗೋಪಿಕೃಷ್ಣ, ನಿರ್ಮಾಪಕ ಪೊಂಗುಲ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.