ADVERTISEMENT

ಕೌಜಲಗಿ: ₹25 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:10 IST
Last Updated 21 ಜುಲೈ 2024, 15:10 IST
ಕೌಜಲಗಿ ಸಮೀಪದ ಮನ್ನಿಕೇರಿಯಲ್ಲಿ ರಸ್ತೆ ಕಾಮಗಾರಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು
ಕೌಜಲಗಿ ಸಮೀಪದ ಮನ್ನಿಕೇರಿಯಲ್ಲಿ ರಸ್ತೆ ಕಾಮಗಾರಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು    

ಕೌಜಲಗಿ: ಸಾರ್ವಜನಿಕ ಸಂಚಾರಕ್ಕೆ ಅಗತ್ಯವಿರುವ ಮನ್ನಿಕೇರಿಯಿಂದ ಬೆಟಗೇರಿ ಮತ್ತು ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟಾರೆ ₹25 ಕೋಟಿ ಮಂಜೂರಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.

ಸಮೀಪದ ಮನ್ನಿಕೇರಿ ಗ್ರಾಮದ ಹತ್ತಿರ ಭಾನುವಾರ ಜರುಗಿದ ಲೋಕೋಪಯೋಗಿ ಇಲಾಖೆಯ ಎಸ್‌ಎಚ್‌ಡಿಪಿ 5ನೇ ಹಂತದ ಯೋಜನೆಯ ₹13 ಕೋಟಿ ವೆಚ್ಚದ ಬೆಟಗೇರಿ-ಬಗರನಾಳ-ಮನ್ನಿಕೇರಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಮತ್ತು 12 ಕೋಟಿ ವೆಚ್ಚದ ಬಾದಾಮಿ-ಗೊಡಚಿ-ಗೋಕಾಕ ಫಾಲ್ಸ್ ರಾಜ್ಯ ಹೆದ್ದಾರಿ-134ರ ಮನ್ನಿಕೇರಿಯಿಂದ ಕೌಜಲಗಿ ವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಭಾಗದ ಜನ ಮೆಚ್ಚಿನ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಈ ಎರಡೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ₹25 ಕೋಟಿ ಬಿಡುಗಡೆಗೊಂಡಿದೆ ಎಂದರು.

ADVERTISEMENT

ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದ ವಿಜಯಸಿದ್ದೇಶ್ವರ ಸ್ವಾಮಿಗಳು, ವೇದಮೂರ್ತಿ ಮಹಾಂತಯ್ಯಾ ಹಿರೇಮಠ, ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಬಾಳಪ್ಪ ಗೌಡರ, ಮುದುಕಪ್ಪ ಗೋಡಿ, ಸುಭಾಸ ಹಾವಾಡಿ, ಪುಂಡಲೀಕ ದಳವಾಯಿ, ಬಸನಗೌಡ ಪಾಟೀಲ, ಸತೀಶ ಗಡಾದ, ಬಸವರಾಜ ನಾಯಿಕರ, ಹಣಮಂತ ಹಾವಾಡಿ, ಪಿಡ್ಬ್ಲೂಡಿ ಎಇ ಎಸ್.ಎಸ್.ಗಸ್ತಿ, ಗುತ್ತಿಗೆದಾರರಾದ ಮನಿಷ ಶೆಟ್ಟಿ, ಸುಧಾಕರ ಶೆಟ್ಟಿ ಇದ್ದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭಾವಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.