ADVERTISEMENT

ಬೆಳಗಾವಿ: ‘ಭೂಮಿಕಾ ಕ್ಲಬ್‌’ ಸಂಭ್ರಮಕ್ಕೆ ಅದ್ಧೂರಿ ಚಾಲನೆ

ಕಿಕ್ಕಿರಿದು ಸೇರಿದ ಮಹಿಳಾ ಮಣಿಗಳು...

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 12:26 IST
Last Updated 18 ಜನವರಿ 2025, 12:26 IST
   

ಬೆಳಗಾವಿ: ‘ಫ್ರೀಡಂ ಆಯಿಲ್‌’ ಪ್ರಸ್ತುತಿ ಮತ್ತು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದ ಸಹಯೋಗದೊಂದಿಗೆ ‘ಭೂಮಿಕಾ ಕ್ಲಬ್‌’ ಮಹಿಳೆಯರ ವಿಶೇಷ ಕಾರ್ಯಕ್ರಮಕ್ಕೆ, ಇಲ್ಲಿನ ಕೆಎಲ್‌ಇ ಸೆಂಟನರಿ ಕನ್ವೆನ್ಷನ್‌ ಸೆಂಟರ್‌ನ ಡಾ.ಬಿ.ಎಸ್‌.ಕೋಡ್ಕಿಣಿ ಸಭಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು.

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯ ವನಿತೆಯರು ಸೇರಿದರು. ಭೂಮಿಕಾ ಕ್ಲಬ್‌ನಿಂದ ಹಮ್ಮಿಕೊಂಡ ‘ಚಂದನವನ ನೆಚ್ಚಿನ ನಟಿ’ಯ ವೇಷಭೂಷಣ ಸ್ಪರ್ಧೆಗಾಗಿ ಹಲವರು ವಿಶಿಷ್ಟ ವೇಷ ಧರಿಸಿಕೊಂಡು ಬಂದರು.

ಇದೇ ವೇಳೆ ಆಯೋಜಿಸಿದ ಮೋಜಿನ ಆಟಗಳಲ್ಲಿಯೂ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು. ವಿವಿಧ ಶಾಲೆ– ಕಾಲೇಜು ಶಿಕ್ಷಕರು, ಮಹಿಳಾ ಸಂಘಟನೆಗಳು, ವನಿತಾ ಮಂಡಳಗಳು, ಕಾಲೇಜು ವಿದ್ಯಾರ್ಥಿನಿಯರು, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಮಹಿಳೆಯರು ತಂಡೋಪತಂಡವಾಗಿ ಬಂದು ಸೇರಿದರು.

ADVERTISEMENT

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹೆಬ್ಬಾಳಕರ್ಸ್‌ ಕ್ಲಿನಿಕ್‌ನ ಚರ್ಮರೋಗ ತಜ್ಞೆ ಡಾ.ಹಿತಾ ಮೃಣಾಲ್‌ ಹೆಬ್ಬಾಳಕರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಆರೋಗ್ಯ ಅರಿವು’ ಕಾರ್ಯಕ್ರಮದಲ್ಲಿ ‘ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌’ ರೋಗಗಳ ಕುರಿತು ಸ್ತ್ರೀರೋಗ ತಜ್ಞೆ ಡಾ.ಸ್ವಾತಿ ಗೌಡರ ಹಾಗೂ ‘ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌’ ಕುರಿತು ಮಕ್ಕಳ ರೋಗ ತಜ್ಞೆ ಡಾ.ಅಭಿಲಾಷಾ ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.