ಬಂಧನ
(ಸಾಂದರ್ಭಿಕ ಚಿತ್ರ)
ಬೆಳಗಾವಿ: ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಖಡೇಬಜಾರ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇಲ್ಲಿನ ಹಳೇ ಗಾಂಧಿ ನಗರದ ನಿವಾಸಿ, ಮೂಲತಃ ತಾಲ್ಲೂಕಿನ ಬಡಾಲ ಅಂಕಲಗಿಯ ರಮೇಶ ಚಂದ್ರಕಾಂತ ಅರಳಿಕಟ್ಟಿ(33) ಬಂಧಿತ ಆರೋಪಿ.
ಬಂಧಿತನಿಂದ ₹1.45 ಲಕ್ಷ ಮೌಲ್ಯದ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಖಡೇಬಜಾರ್ ಮತ್ತು ಶಹಾಪುರ ಠಾಣೆ ವ್ಯಾಪ್ತಿಯ ಎರಡು ಬೈಕ್ ಕಳ್ಳತನ ಪ್ರಕರಣ ಭೇದಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.