ADVERTISEMENT

ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ತಜ್ಞರ ತಂಡ; 4 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 7:24 IST
Last Updated 16 ನವೆಂಬರ್ 2025, 7:24 IST
   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭಾನುವಾರ ಭೇಟಿ ನೀಡಿದ ತಜ್ಞರ ತಂಡವು ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿತು.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಬೆಂಗಳೂರು ಶಾಖೆಯ ತಜ್ಞ ಡಾ.ಚಂದ್ರಶೇಖರ ಎನ್., ಬನ್ನೇರುಘಟ್ಟ ಶಾಖೆ ತಜ್ಞ ಡಾ.ಮಂಜುನಾಥ ವಿ., ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಡಾ.ಸುನೀಲ್ ಪನ್ವಾರ್ ಅವರ ತಂಡ ಭಾನುವಾರ ಬೆಳಿಗ್ಗೆ ಕಿರು ಮೃಗಾಲಯಕ್ಕೆ ಭೇಟಿ ನೀಡಿತು.

ADVERTISEMENT

ಬ್ಯಾಕ್ಟೀರಿಯಾ ಸೋಂಕಿನಿಂದ(ಗಳಲೆ ಕಾಯಿಲೆಯಿಂದ) ಗುರುವಾರ 20, ಶನಿವಾರ 8 ಕೃಷ್ಣಮೃಗ ಮೃತಪಟ್ಟಿದ್ದವು. ಈ ಪೈಕಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಗಿತ್ತು.

ಮೂರು ಕಳೇಬರಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಅವುಗಳ ಜತೆಗೆ, ಶನಿವಾರ ತಡರಾತ್ರಿ ಮೃತಪಟ್ಟ ಮತ್ತೊಂದು ಕೃಷ್ಣಮೃಗದ ಮರಣೋತ್ತರ ಪರೀಕ್ಷೆಯನ್ನು ತಜ್ಞರ ತಂಡ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.