ADVERTISEMENT

ಬೆಳಗಾವಿ | ರಕ್ತದಾನ ಶಿಬಿರ 15ರಂದು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 1:49 IST
Last Updated 13 ಆಗಸ್ಟ್ 2025, 1:49 IST
ಹರ್ಷವರ್ಧನ ಇಂಚಲ
ಹರ್ಷವರ್ಧನ ಇಂಚಲ   

ಬೆಳಗಾವಿ: ‘ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಜೈನ ಇಂಟರ್‌ನ್ಯಾಷನಲ್‌  ಟ್ರೇಡ್ ಆರ್ಗನೈಸೇಷನ್‌(ಜಿತೋ) ಬೆಳಗಾವಿ ವಿಭಾಗದ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರ ವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ’ ಎಂದು ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಗತ್ಯವಿರುವವರಿಗೆ ತ್ವರಿತವಾಗಿ ರಕ್ತ ಒದಗಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಶಿಬಿರ ಆಯೋಜಿಸಿದ್ದೇವೆ. ಕಳೆದ ವರ್ಷ 836 ಯೂನಿಟ್‌ ರಕ್ತ ಸಂಗ್ರಹವಾಗಿತ್ತು. ಈ ವರ್ಷ 1 ಸಾವಿರ ಯೂನಿಟ್‌ಗಿಂತ ಹೆಚ್ಚು ರಕ್ತ ಸಂಗ್ರಹದ ನಿರೀಕ್ಷೆ ಇದೆ’ ಎಂದರು.

ಶಿಬಿರದ ಸಂಯೋಜಕ ವಿಕ್ರಮ ಜೈನ, ‘ಕೆಎಲ್ಇ ರಕ್ತನಿಧಿ ಕೇಂದ್ರ, ಬಿಮ್ಸ್‌ ರಕ್ತನಿಧಿ ಕೇಂದ್ರ, ಮಹಾವೀರ ರಕ್ತನಿಧಿ ಕೇಂದ್ರ, ಬೆಳಗಾವಿ ರಕ್ತನಿಧಿ ಕೇಂದ್ರ ಸೇರಿದಂತೆ ಪ್ರಮುಖ ರಕ್ತನಿಧಿ ಕೇಂದ್ರಗಳು ಶಿಬಿರದಲ್ಲಿ ಪಾಲ್ಗೊಳ್ಳಲಿವೆ. ಹಲವು ಸಂಸ್ಥೆಗಳು, ಕೈಗಾರಿಕೆಗಳು, ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಪಾಲುದಾರರಾಗಲು ಒಪ್ಪಿಕೊಂಡಿವೆ’ ಎಂದು ಹೇಳಿದರು.

ADVERTISEMENT

‘ಶಿಬಿರದಲ್ಲಿ ರಕ್ತದಾನ ಮಾಡುವವರಿಗೆ ಒಂದು ವರ್ಷದ ಅವಧಿಗೆ ₹1 ಲಕ್ಷ ಅಪಘಾತ ವಿಮೆ ಸೌಕರ್ಯ ಕಲ್ಪಿಸುತ್ತೇವೆ. ಇಲ್ಲಿ ಸಂಗ್ರಹವಾದ ರಕ್ತವನ್ನು ಎಲ್ಲ ರಕ್ತನಿಧಿ ಕೇಂದ್ರಗಳಲ್ಲಿ ಇರಿಸುತ್ತೇವೆ. ಅಗತ್ಯ ಇರುವವರು ಜಿತೋ ಸಂಪರ್ಕಿಸಿ ರಕ್ತ ಪಡೆಯಬಹುದು. ಮಾಹಿತಿಗೆ ಮೊ.ಸಂ.89711 02555 ಸಂಪರ್ಕಿಸಬಹುದು’ ಎಂದು ಅವರು ತಿಳಿಸಿದರು.

ಅಭಯ ಆದಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.