ADVERTISEMENT

ರೋಚಕ ಬಂಡಿ ಓಡಿಸುವ ಸ್ಪರ್ಧೆ 

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:29 IST
Last Updated 14 ಏಪ್ರಿಲ್ 2025, 16:29 IST
ಮೂಡಲಗಿ ತಾಲ್ಲೂಕಿನ ಯಾದವಾಡದ ಚೌಕೇಶ್ವರ, ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತ ಜರುಗಿದ ಎತ್ತುಗಳ ಬಂಡಿ ಓಡಿಸುವ ಸ್ಪರ್ಧೆಯ ನೋಟ
ಮೂಡಲಗಿ ತಾಲ್ಲೂಕಿನ ಯಾದವಾಡದ ಚೌಕೇಶ್ವರ, ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತ ಜರುಗಿದ ಎತ್ತುಗಳ ಬಂಡಿ ಓಡಿಸುವ ಸ್ಪರ್ಧೆಯ ನೋಟ   

ಮೂಡಲಗಿ: ತಾಲ್ಲೂಕಿನ ಯಾದವಾಡದ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ ಒಂದು ನಿಮಿಷದಲ್ಲಿ ಎತ್ತುಗಳ ಬಂಡಿ ಓಡಿಸುವ ಸ್ಪರ್ಧೆ ರೋಚಕವಾಗಿತ್ತು.

21 ಜೋಡಿ ಎತ್ತುಗಳ ಸ್ಪರ್ಧೆಯಲ್ಲಿದ್ದು ಅವುಗಳು ಓಡುತ್ತಿದ್ದಂತೆ ಸೇರಿದ ಜನರ ಚಪ್ಪಾಳೆ, ಸಿಳ್ಳೆ ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು. ಬೆಳವಟಿಗಿ, ಗೋವಿನಕೋಪ್ಪ, ಬೆಂಡಿಗೇರಿ, ದೇವರಕೊಂಡ, ತಿರಲಾಪುರ, ದಾದನಟ್ಟಿ, ಕುದರಿಮನಿ, ಅಜರಾ, ಮರಿಕಟ್ಟಿ, ಮಾಡಕನೂರ, ಗೋರಬಾಳ, ಸಂಗಾಂವ, ಮರಿಕಟ್ಟಿ ಕ್ರಮವಾಗಿ ಒಂದರಿಂದ ಹದಿಮೂರು ಎತ್ತುಗಳ ಮಾಲೀಕರು ನಗದು ಬಹುಮಾನ ಪಡೆದುಕೊಂಡರು.

ಸ್ಪರ್ಧೆಯ ನಿರ್ಣಾಯಕರಾಗಿ ರಮೇಶ ಸಾವಳಗಿ, ಹಣಮಂತ ಚಿಕ್ಕೇಗೌಡರ, ಗುರುನಾಥ ರಾಮದುರ್ಗ, ಹಣಮಂತ ಹ್ಯಾಗಾಡಿ, ಗೋಲಪ್ಪ ಕಾಗವಾಡ, ನಾಗರಾಜ ಅವರಾದಿ, ವಿಠ್ಠಲ ಕಂಕಣವಾಡಿ, ಹಣಮಂತ ಬಿಲಕುಂದಿ, ವೆಂಕಟ ಕೇರಿ, ಕಲ್ಲಪ್ಪ ಗಾಣಿಗೇರ, ಸುನಿಲ ನ್ಯಾಮಗೌಡರ, ಜ್ಯೋತಿಬಾ ಧುಮಾಳೆ, ಮಲ್ಲಪ್ಪ ರಾಮದುರ್ಗ, ಮಲ್ಲಪ್ಪ ಸಾವಗಿ ಇದ್ದರು.

ADVERTISEMENT

ನಾಟಕ ಉದ್ಘಾಟನೆ: ಗಿರಿಸಾಗರ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಮಾರುತೇಶ್ವರ ನಾಟ್ಯ ಸಂಘದವರಿಂದ ‘ರತ್ನ ಮಾಂಗಲ್ಯ’ ನಾಟಕ ಪ್ರದರ್ಶಗೊಂಡಿತು. ಚೌಕಿಮಠದ ಶ್ರೀ ನಾಟಕವನ್ನು ಉದ್ಘಾಟಿಸಿದರು. ಮಾನಮ್ಮಿಯ ಸಿದ್ಧರಾಮೇಶ್ವರ ಸ್ವಾಮೀಜಿ, ಜಾತ್ರೆ ಕಮಿಟಿ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ರಾಮನಗೌಡ ಪಾಟೀಲ, ಶಿವನಗೌಡ ಪಾಟೀಲ, ರಾಜು ಚಿಕ್ಕಲಗೌಡರ, ಯಲ್ಲಪ್ಪಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.