ಗೋಕಾಕ (ಬೆಳಗಾವಿ ಜಿಲ್ಲೆ): ಗೋಕಾಕ ಮಹಾಲಕ್ಷ್ಮಿ ಜಾತ್ರೆ ಪ್ರಯುಕ್ತ ಭಾನುವಾರ ನಡೆದ ಜೋಡೆತ್ತಿನ ಚಕ್ಕಡಿ ಓಡಿಸುವ ಶರ್ಯತ್ತಿನಲ್ಲಿ ಯರಗಟ್ಟಿ ಪಟ್ಟಣದ ಅಜೀತ ದೇಸಾಯಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದು ₹5 ಲಕ್ಷ ನಗದು ಬಹುಮಾನ ಗಿಟ್ಟಿಸಿಕೊಂಡವು.
ಯರಗಟ್ಟಿಯವರೇ ಆದ ನಿಖಿಲ ದೇಸಾಯಿ ಅವರ ಎತ್ತುಗಳು ದ್ವಿತೀಯ ಸ್ಥಾನ (₹3 ಲಕ್ಷ) ಮತ್ತು ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿ ಗ್ರಾಮದ ಬಾಳಪ್ಪ ಮಲ್ಲಪ್ಪ ನಾಯಿಕ (₹ 1 ಲಕ್ಷ) ಅವರ ಎತ್ತುಗಳು ತೃತೀಯ ಬಹುಮಾನ ಪಡೆದವು.
ನಗರ ಹೊರವಲಯದ ಸಂಕೇಶ್ವರ– ನರಗುಂದ ರಾಜ್ಯ ಹೆದ್ದಾರಿಯಿಂದ 10 ಕಿ.ಮೀ ದೂರದವರೆಗೆ ಓಟ ನಡೆಯಿತು. ದಶಕದ ಬಳಿಕ ನಡೆದ ಎತ್ತುಗಳ ಓಟ ನೋಡಲು ರಾಜ್ಯದ ಬೇರೆಬೇರೆ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ರೈತರು ಸೇರಿದರು.
ಮುಖಂಡ ಅಂಬಿರಾವ ಪಾಟೀಲ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡ ಅಶೋಕ ಪೂಜಾರಿ, ಯುವ ನಾಯಕ ಅಮರನಾಥ ಜಾರಕಿಹೊಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.