ADVERTISEMENT

ನಿಪ್ಪಾಣಿ | ಸಿಇಟಿ ಪರೀಕ್ಷೆ: ಉಚಿತ ಬಸ್‍ಗಳ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:50 IST
Last Updated 16 ಏಪ್ರಿಲ್ 2024, 15:50 IST
ಡಾ. ಉಮೇಶ ಪಾಟೀಲ
ಡಾ. ಉಮೇಶ ಪಾಟೀಲ   

ನಿಪ್ಪಾಣಿ: ಏ.18 ಹಾಗೂ 19ರಂದು ಜರುಗಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ(ವಿಎಸ್‍ಎಂಎಸ್‍ಆರ್‌ಕೆಐಟಿ)ದಿಂದ ಬಸ್‍ಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉಮೇಶ ಪಾಟೀಲ ತಿಳಿಸಿದ್ದಾರೆ.

ತಾಂತ್ರಿಕ ಮಹಾವಿದ್ಯಾಲಯ (ಪರೀಕ್ಞಾ ಕೇಂದ್ರ ಸಂಖ್ಯೆ – 315)ದಲ್ಲಿ ವಿದ್ಯಾರ್ಥಿಗಳ ಹಾಗೂ ಪಾಲಕರ ಅನುಕೂಲಕ್ಕಾಗಿ ಬಸ್‍ಗಳನ್ನು ಉಚಿತವಾಗಿ ಬಿಡಲಾಗುವುದು. ಪರೀಕ್ಷೆಗಳು ನಡೆಯಲಿರುವ ಎರಡೂ ದಿನ ಬೆಳಿಗ್ಗೆ 8.30 ರಿಂದ 9.30ರ ವರೆಗೆ ಸ್ಥಳೀಯ ಬಸ್ ನಿಲ್ದಾಣದಿಂದ ಒಟ್ಟು 6 ಬಸ್‍ಗಳನ್ನು ಬಿಡಲು ನಿಯೋಜಿಸಲಾಗಿದೆ. ಅಲ್ಲದೆ ಪರೀಕ್ಷೆಗಳು ಮುಗಿಯುವವರೆಗೆ ಪಾಲಕರಿಗೆ ವಿಎಸ್‍ಎಂ ಕನ್ವೆನ್ಶನ್ ಹಾಲ್‌ನಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗಳು ಮುಗಿದ ನಂತರ ಮತ್ತೆ ಮಹಾವಿದ್ಯಾಲಯದಿಂದ ಬಸ್ ನಿಲ್ದಾಣವರೆಗೆ ಬಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರೊ. ಪ್ರಿಯಾಂಕಾ ಚೌಗುಲೆ (9980893153), ಪ್ರವೀಣ ಮಾನೆ(9741346687) ಮತ್ತು ಕೈಲಾಸ್ ಪಠಾಡೆ(7975268402) ಅವರನ್ನು ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.