ADVERTISEMENT

ಸೇತುವೆ ಕುಸಿತ: ಬೈಪಾಸ್ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 4:02 IST
Last Updated 8 ಅಕ್ಟೋಬರ್ 2020, 4:02 IST
ಗೋಕಾಕ ತಾಲ್ಲೂಕಿನ ದಂಡಿನ ಮಾರ್ಗದ ಮೆಳವಂಕಿ ಬಳಿ ಕುಸಿದಿರುವ ಸೇತುವೆಯ ಪಕ್ಕದಲ್ಲಿ ಬೈಪಾಸ್ ನಿರ್ಮಾಣ ಕಾಮಗಾರಿಗೆ ಮುಖಂಡರು ಬುಧವಾರ ಚಾಲನೆ ನೀಡಿದರು
ಗೋಕಾಕ ತಾಲ್ಲೂಕಿನ ದಂಡಿನ ಮಾರ್ಗದ ಮೆಳವಂಕಿ ಬಳಿ ಕುಸಿದಿರುವ ಸೇತುವೆಯ ಪಕ್ಕದಲ್ಲಿ ಬೈಪಾಸ್ ನಿರ್ಮಾಣ ಕಾಮಗಾರಿಗೆ ಮುಖಂಡರು ಬುಧವಾರ ಚಾಲನೆ ನೀಡಿದರು   

ಗೋಕಾಕ: ಮಳೆಯಿಂದಾಗಿ ಕುಸಿದಿರುವ ಮೆಳವಂಕಿ ಸೇತುವೆ ಬಳಿ ಸಾರ್ವಜನಿಕರ ಸಂಚಾರಕ್ಕಾಗಿ ಬೈಪಾಸ್ ನಿರ್ಮಾಣಕ್ಕೆ ಮುಖಂಡರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಮುಖಂಡ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ‘ಸೋಮವಾರ ಸೇತುವೆಯು ಹಠಾತ್‌ ಕುಸಿದಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗೋಕಾಕದಿಂದ ಕೌಜಲಗಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಮಗಾರಿಗೆ ₹ 70 ಲಕ್ಷ ಅನುದಾನ ಬಿಡುಗಡೆ ಮಾಡಿಸಿರುವುದು ಶ್ಲಾಘನೀಯ’ ಎಂದರು.

‘ರಸ್ತೆ ನಿರ್ಮಾಣದ ನಂತರ ಜನರಿಗೆ ಅನುಕೂಲವಾಗಲಿದೆ. ಕೆಲವು ಕಡೆಗಳಲ್ಲಿ ಸೇತುವೆಗಳು ಬಿದ್ದು ವರ್ಷಗಳೆ ಉರುಳುತ್ತಿದ್ದರೂ ಅವುಗಳತ್ತ ಗಮನಹರಿಸುವವರು ಇರುವುದಿಲ್ಲ. ಹೀಗಿರುವಾಗ ಇಲ್ಲಿನ ಶಾಸಕರು ತಕ್ಷಣ ಸ್ಪಂದಿಸಿ, ಬೈಪಾಸ್ ನಿರ್ಮಾಣಕ್ಕೆ ಅನುದಾನ ಒದಗಿಸಿರುವುದು ಅವರ ಜನಪರ ಕಾಳಜಿಗೆ ಕನ್ನಡಿ ಹಿಡಿದಿದೆ’ ಎಂದು ಹೇಳಿದರು.

ADVERTISEMENT

ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಮುಖಂಡರಾದ ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಭೀಮಪ್ಪ ಚಿಪ್ಪಲಕಟ್ಟಿ, ಈರಪ್ಪ ಬೀರನಗಡ್ಡಿ, ಸತ್ತೆಪ್ಪ ಬಬಲಿ, ಅಲ್ಲಪ್ಪ ಕಂಕಣವಾಡಿ, ರಾಮಪ್ಪ ಕಾಪಸಿ, ಸಣ್ಣದೊಡ್ಡಪ್ಪ ಕರೆಪ್ಪನ್ನವರ, ಮುತ್ತೆಪ್ಪ ಹಡಗಿನಾಳ, ನಾಗಪ್ಪ ಮಂಗಿ, ಕಾಮಶಿ ಕರೆನ್ನವರ, ರಮೇಶ ಬೀರನಗಡ್ಡಿ, ಹಣಮಂತಗೌಡ ಪಾಟೀಲ, ವಕೀಲ ಎ.ಎಸ್. ಅಗ್ನೆಪ್ಪಗೋಳ, ಲೋಕೋಪಯೋಗಿ ಇಲಾಖೆಯ ಎಇ ನಾಗಾಭರಣ ಕೆ.ಪಿ., ಗುತ್ತಿಗೆದಾರ ಹಣಮಂತ ದಾಸನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.