ADVERTISEMENT

ಕೇಂಬ್ರಿಡ್ಜ್‌ ಇಂಗ್ಲಿಷ್ ಪರೀಕ್ಷಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:59 IST
Last Updated 16 ಡಿಸೆಂಬರ್ 2019, 13:59 IST
ಬೆಳಗಾವಿಯ ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯಲ್ಲಿ ‘ಕೇಂಬ್ರಿಡ್ಜ್‌ ಇಂಗ್ಲಿಷ್ ಪರೀಕ್ಷಾ ಕೇಂದ್ರ’ವನ್ನು ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಅರುಣಾಚಲಂ ಸೋಮವಾರ ಉದ್ಘಾಟಿಸಿದರು
ಬೆಳಗಾವಿಯ ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯಲ್ಲಿ ‘ಕೇಂಬ್ರಿಡ್ಜ್‌ ಇಂಗ್ಲಿಷ್ ಪರೀಕ್ಷಾ ಕೇಂದ್ರ’ವನ್ನು ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಅರುಣಾಚಲಂ ಸೋಮವಾರ ಉದ್ಘಾಟಿಸಿದರು   

ಬೆಳಗಾವಿ: ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ವಿಭಾಗವಾದ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ವತಿಯಿಂದ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯಲ್ಲಿ ‘ಇಂಗ್ಲಿಷ್ ಪರೀಕ್ಷಾ ಕೇಂದ್ರ’ವನ್ನು ಆರಂಭಿಸಲಾಗಿದೆ.

ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಟಿ.ಕೆ. ಅರುಣಾಚಲಂ, ‘ವಿದ್ಯಾರ್ಥಿಗಳಿಗೆ ಅವರ ಭಾಷೆ ಹಾಗೂ ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸಲು, ಅಂತರರಾಷ್ಟ್ರೀಯ ಪ್ರಾಶಸ್ತ್ಯ ಪಡೆಯಲು ಬೇಕಾಗುವ ಸಹಾಯ ಮಾಡುವ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ವಿದ್ಯಾಸಂಸ್ಥೆಯು ಕೈಗೊಂಡಿರುವ ಈ ಉಪಕ್ರಮವನ್ನು ನಾವು ಶ್ಲಾಘಿಸುತ್ತೇವೆ’ ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸೊಸೈಟಿಯ ಅಧ್ಯಕ್ಷ ರಾಜ್ ಶ್ಯಾಮ್‌ ಘಾಟಗೆ, ಪ್ರಾಂಶುಪಾಲೆ ಲಕ್ಷ್ಮಿ ಇಂಚಲ, ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲಿಷ್‌ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಆನಂದ್‌ರಾಜ್‌, ಕನ್ಸಲ್ಟೆಂಟ್ ಡಿ.ಎಸ್. ಭರತ್ ಅಯ್ಯರ್ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.