ADVERTISEMENT

ಕ್ರೆಡಾಯ್‌ ಅಧ್ಯಕ್ಷರಾಗಿ ಚೈತನ್ಯ ಕುಲಕರ್ಣಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 15:05 IST
Last Updated 23 ಏಪ್ರಿಲ್ 2021, 15:05 IST
ಚೈತನ್ಯ ಕುಲಕರ್ಣಿ
ಚೈತನ್ಯ ಕುಲಕರ್ಣಿ   

ಬೆಳಗಾವಿ: ಕ್ರೆಡಾಯ್‌ (ಕಾನ್ಫೆಡರೇಷನ್‌ ಆಫ್‌ ರಿಯಲ್‌ ಎಸ್ಟೇಟ್ ಡೆವಲಪರ್ಸ್‌ ಅಸೋಸಿಯೇಷನ್) ಕರ್ನಾಟಕ ಅಧ್ಯಕ್ಷರಾಗಿ ಇಲ್ಲಿನ ಚೈತನ್ಯ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ವರ್ಚುವಲ್‌ ವೇದಿಕೆಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2021-23ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಗಿನ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಿಕಟಪೂರ್ವ ಅಧ್ಯಕ್ಷ ಆಸ್ಟಿನ್ ರೋಚ್ ಅವರು ಚೈತನ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿಜಯಪುರದ ಅನುಪಮ್ ರುನುವಾಲ್ (ಕಾರ್ಯದರ್ಶಿ), ಬೆಂಗಳೂರಿನ ಶಿವರಾಮ ಕುಮಾರ ಮಲಕಾಲ (ಖಜಾಂಚಿ), ಸಂಜೋಗ್ ರಾಠಿ ಮತ್ತು ಡಿ.ಬಿ. ಮೆಹ್ತಾ (ಉಪಾಧ್ಯಕ್ಷರು), ಕೈಸ್ ನೂರಾನಿ ಹಾಗೂ ಸಿರಾಜ್ ಅಹ್ಮದ್ (ಜಂಟಿ ಕಾರ್ಯದರ್ಶಿ), ಪ್ರದೀಪ್ ಡಿ.ರಾಯ್ಕರ್ (ಪ್ರೆಸಿಡೆಂಟ್ ಎಲೆಕ್ಟ್) ಆಗಿ ಆಯ್ಕೆಯಾದರು.

ADVERTISEMENT

ರಾಷ್ಟ್ರೀಯ ಉಪಾಧ್ಯಕ್ಷ ಜಿ.ರಾಮ ರಡ್ಡಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಶಂಕರ ಶಾಸ್ತ್ರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ರಾಷ್ಟ್ರೀಯ ಸಮಿತಿ ಸದಸ್ಯ ಬಾಲಕೃಷ್ಣ ಹೆಗಡೆ, ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ನಾಗರಾಜ ರೆಡ್ಡಿ, ರಾಷ್ಟ್ರೀಯ ಸಮಿತಿ ಸದಸ್ಯ ಕೆ. ಶ್ರೀರಾಮ, ಕರ್ನಾಟಕ ಶಾಖೆಯ ಮಾಜಿ ಅಧ್ಯಕ್ಷ ಜಗದೀಶ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.