ADVERTISEMENT

'ಸಾಹಿತಿಗಳು, ಪುಸ್ತಕಗಳಿಂದ ಬದಲಾವಣೆ ಸಾಧ್ಯ’

ಸತೀಶಕುಮಾರ ಹೊಸಮನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:31 IST
Last Updated 8 ಅಕ್ಟೋಬರ್ 2019, 15:31 IST
ಸತೀಶಕುಮಾರ ಹೊಸಮನಿ
ಸತೀಶಕುಮಾರ ಹೊಸಮನಿ   

ಗೋಕಾಕ: ‘ಸಾಮಾಜಿಕ ಬದಲಾವಣೆಯು ಸಾಹಿತಿ ಮತ್ತು ಪುಸ್ತಕಗಳಿಂದ ಮಾತ್ರ ಸಾಧ್ಯ’ ಎಂದು ಸಾರ್ವಜನಿಕ ಗಂಥಾಲಯ ನಿರ್ದೇಶನಾಲಯ ನಿರ್ದೇಶಕ ಸತೀಶಕುಮಾರ ಹೊಸಮನಿ ಹೇಳಿದರು.

ತಾಲ್ಲೂಕಿನ ಸಾವಳಗಿಯ ಶಿವಲಿಂಗೇಶ್ವರ ಪೀಠದಲ್ಲಿ ನಡೆದ ದಸರಾ ಉತ್ಸವದಲ್ಲಿ ಮಾತನಾಡಿದರು.

‘ಯಾವ ಪ್ರದೇಶದಲ್ಲಿ ಶಾಲೆಗಳು, ಗ್ರಂಥಾfಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆಯೋ ಅದು ಸುಶಿಕ್ಷಿತರ ಹಾಗೂ ಸುಸಂಸ್ಕೃತರ ನಾಡು ಎಂದು ಗುರುತಿಸಿಕೊಳ್ಳತ್ತದೆ’ ಎಂದರು.

ADVERTISEMENT

‘ಉತ್ತರ ಭಾರತದ ರಾಜ್ಯಗಳಲ್ಲಿ ಬೆರಳೆಣಿಕೆಯಷ್ಟು ಗ್ರಂಥಾಲಯಗಳಿವೆ. ಕರ್ನಾಟಕದಲ್ಲಿ 7ಸಾವಿರ ಸಾರ್ವಜನಿಕ ಗ್ರಂಥಾಲಯಗಳಿವೆ. ರಾಷ್ಟ್ರ ಮಟ್ಟದಲ್ಲಿ ಪುರಸ್ಕಾರವೂ ದೊರೆತಿದೆ. 30 ಜಿಲ್ಲಾ, 170 ತಾಲ್ಲೂಕು ಹಾಗೂ 26 ನಗರ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅವಶ್ಯವಿರುವ ಎಲ್ಲ ಪುಸ್ತಕಗಳ ಸಂಗ್ರಹವನ್ನು ಸಾರ್ವಜನಿಕ ಗ್ರಂಥಾಲಯಗಳು ಹೊಂದಿವೆ. ಈ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಘೋಡಗೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಿಸುತ್ತಿರುವ ಡಾ.ಚಂದ್ರಶೇಖರ ಕಂಬಾರ ಭವನದಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಯಶೋದಾ ಮರಬಸಣ್ಣವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.