ADVERTISEMENT

ಚನ್ನಮ್ಮನ ಕಿತ್ತೂರು: ಕೋಳಿ ಫಾರ್ಮ್ ಸ್ಥಗಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 13:10 IST
Last Updated 7 ಏಪ್ರಿಲ್ 2025, 13:10 IST
<div class="paragraphs"><p> ಕೋಳಿ ಫಾರ್ಮ್</p></div>

ಕೋಳಿ ಫಾರ್ಮ್

   

ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಇರುವ ತತ್ತಿ ಕೋಳಿ ಸಾಕಾಣಿಗೆ ಫಾರ್ಮ್ಅನ್ನು ಅನುಮತಿ ಇಲ್ಲದೆ ನಡೆಸಲಾಗುತ್ತಿದೆ. ನೊಣಗಳ ಹಾವಳಿಯೂ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಫಾರ್ಮ್ ಬಂದ್ ಮಾಡಬೇಕು’ ಎಂದು ಅಂಬಡಗಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಬಂಧಪಟ್ಟವರಿಗೆ ಈಚೆಗೆ ನೋಟಿಸ್ ನೀಡಿದ್ದಾರೆ.

‘ಫಾರ್ಮ್‌ನಲ್ಲಿ ಸ್ವಚ್ಛತೆ ಕಾಪಾಡದೆ ಇರುವುದರಿಂದಾಗಿ ಸುತ್ತಲಿನ ಪರಿಸರದಲ್ಲಿ ನೊಣಗಳು ಹೆಚ್ಚಾಗಿವೆ. ಇದರಿಂದ ಶಾಲೆ, ಕಾಲೇಜು ಹಾಗೂ ಕಲ್ಯಾಣ ಮಂಟಪದವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಇದು ಜನವಸತಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಂಭವವಿದೆ. ಕೂಡಲೇ ಫಾರ್ಮ್ ಬಂದ್ ಮಾಡಬೇಕು’ ಎಂದು ನೋಟಿಸ್‌ನಲ್ಲಿ ಅಭಿವೃದ್ಧಿ ಅಧಿಕಾರಿ ಸೂಚಿಸಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಹೋರಾಟಗಾರ ಹಬೀಬ ಶಿಲೇದಾರ ಅವರು ಗ್ರಾಮ ಪಂಚಾಯಿತಿಗೆ ದೂರು ನೀಡಿ, ಫಾರ್ಮ್ ದಿಂದ ಆಗುತ್ತಿರುವ ತೊಂದರೆಯನ್ನು ವಿವರಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.