ADVERTISEMENT

ಜೀವನ ನೀಡಿದ ಮೂಲ ಕಸುಬು ಮರೆಯಬೇಡಿ: ಮಾರುತಿ ಭಂಡಾರೆ ಸಲಹೆ

‘ಚರ್ಮಶ್ರೀ ಪ್ರಶಸ್ತಿ’ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 11:34 IST
Last Updated 26 ಮಾರ್ಚ್ 2019, 11:34 IST
ಬೆಳಗಾವಿಯಲ್ಲಿ ಮಾರುತಿ ಭಂಡಾರೆ ಅವರಿಗೆ ‘ಚರ್ಮಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪರಶುರಾಮಭಾವು ನಂದಿಹಳ್ಳಿ, ಗಜಾನನ ಸಾಬಣ್ಣವರ, ವೈ.ಬಿ. ಚೌಗಲೆ, ಅಪ್ಪಾಸಾಬ ಮನಗೂಳಿ, ರವಿ ಶಿಂಧೆ, ಸಂತೋಷ ಹೊಂಗಲ, ಶಿವರಾಜ ಸೌದಾಗರ, ಘನಶ್ಯಾಮ ಭಾಂಡಗೆ, ಸುನೀತಾ ಹೊಂಗಲ, ಮೋಹನ ಸಾತಪೂತೆ ಇದ್ದರು
ಬೆಳಗಾವಿಯಲ್ಲಿ ಮಾರುತಿ ಭಂಡಾರೆ ಅವರಿಗೆ ‘ಚರ್ಮಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪರಶುರಾಮಭಾವು ನಂದಿಹಳ್ಳಿ, ಗಜಾನನ ಸಾಬಣ್ಣವರ, ವೈ.ಬಿ. ಚೌಗಲೆ, ಅಪ್ಪಾಸಾಬ ಮನಗೂಳಿ, ರವಿ ಶಿಂಧೆ, ಸಂತೋಷ ಹೊಂಗಲ, ಶಿವರಾಜ ಸೌದಾಗರ, ಘನಶ್ಯಾಮ ಭಾಂಡಗೆ, ಸುನೀತಾ ಹೊಂಗಲ, ಮೋಹನ ಸಾತಪೂತೆ ಇದ್ದರು   

ಬೆಳಗಾವಿ: ಕರ್ನಾಟಕ ಲೆದರ್ ಆರ್ಟಿಜನ್ಸ್‌ ಸಂಘದಿಂದ ಕೊಡಮಾಡುವ ‘ಚರ್ಮಶ್ರೀ ಪ್ರಶಸ್ತಿ’ಯನ್ನು ಅಥಣಿ ತಾಲ್ಲೂಕು ಮದಭಾವಿ ಗ್ರಾಮದ ಮಾರುತಿ ಭಂಡಾರೆ ಅವರಿಗೆ ಪ್ರದಾನ ಮಾಡಲಾಯಿತು.

ನಂತರ ಮಾತನಾಡಿದ ಅವರು, ‘ಜೀವನ ನೀಡಿದ ಮೂಲ ಕಸುಬುಗಳನ್ನು ಮರೆಯಬಾರದು’ ಎಂದು ತಿಳಿಸಿದರು.

‘ನಾನು ತುಂಬಾ ಕಷ್ಟದಿಂದ ಬಂದವನು. ಚರ್ಮೋದ್ಯೋಗ ಮಾಡಿ ಸಂಪಾದಿಸಿದ ಹಣದಿಂದ ನಾನು ಎಂ.ಎ. ಪದವಿ ಪಡೆದೆ. ಮುಂದೆ ಸರ್ಕಾರಿ ಸೇವೆಯಲ್ಲಿ ದೊಡ್ಡ ಹುದ್ದೆಯಲ್ಲಿದರೂ ನನಗೆ ಜೀವನ ಕಟ್ಟಿಕೊಟ್ಟ ಚರ್ಮೋದ್ಯೋಗವನ್ನು ಮರೆಯಲಿಲ್ಲ. ಜೊತೆಗೆ ಕೊಲ್ಹಾಪುರಿ ಚಪ್ಪಲಿ ಹಾಗೂ ವಿಶೇಷ ವಿನ್ಯಾಸದ ಬಂಟು ಬೂಟ್ ವಿಶ್ವ ಪ್ರಸಿದ್ಧಿ ಪಡೆದಿದೆ. ನನ್ನ ಕೆಲಸವನ್ನು ಗುರುತಿಸಿದ ಬೇರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ನನ್ನನ್ನು ಗೌರವಿಸಿವೆ. ಈಗ ತವರು ಜಿಲ್ಲೆಯ ಸಂಸ್ಥೆಯಿಂದ ಪ್ರಶಸ್ತಿ ನೀಡಿರುವುದು ಸಂತೋಷ ಉಂಟು ಮಾಡಿದೆ’ ಎಂದು ಹೇಳಿದರು.

ADVERTISEMENT

ಸಂಘದ ಅಧ್ಯಕ್ಷ ಸಂತೋಷ ಹೊಂಗಲ ಮಾತನಾಡಿ, ‘ಚರ್ಮೋದ್ಯೋಗ ಪ್ರೋತ್ಸಾಹಿಸುವ ಹಾಗೂ ಚರ್ಮ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ 11 ವರ್ಷಗಳಿಂದ ಚರ್ಮಶ್ರೀ ಪ್ರಶಸ್ತಿ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ಮಾರುತಿ ಭಂಡಾರೆ– ಸ್ವರ್ಣಲತಾ ಭಂಡಾರೆ ದಂಪತಿಯನ್ನು ಗೌರವಿಸಲಾಯಿತು.

ಮುಖಂಡರಾದ ಪರಶುರಾಮ ನಂದಿಹಳ್ಳಿ, ಅಪ್ಪಾಸಾಬ ಮನಗೂಳಿ, ರವಿ ಶಿಂಧೆ, ಶಿವರಾಜ ಸೌದಾಗರ, ವೈ.ಬಿ. ಚೌಗಲೆ, ಘನಶ್ಯಾಮ ಭಾಂಡಗೆ, ಸುನೀತಾ ಹೊಂಗಲ, ಸುಖದೇವ ಸೌದಾಗರ ಇದ್ದರು.

ಭಾರತಿ ಸಾಬಣ್ಣವರ ಸ್ವಾಗತಿಸಿದರು. ಗಜಾನನ ಸಾಬಣ್ಣವರ ನಿರೂಪಿಸಿದರು. ಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.