ADVERTISEMENT

ಚಿಕ್ಕೋಡಿ| ರಥೋತ್ಸವಕ್ಕೆ ಪೂಜ್ಯರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 2:14 IST
Last Updated 11 ಫೆಬ್ರುವರಿ 2026, 2:14 IST
ಚಿಕ್ಕೋಡಿ ಪಟ್ಟಣದಲ್ಲಿ ನೂತನ ತೇರನ್ನು ಹಸಿರು ನಿಶಾನೆ ತೋರಿಸುವ ಮೂಲಕ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ನೂತನ ರಥೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಜಗದೀಶ ಕವಟಗಿಮಠ, ಅನಿಲ ಮಾನೆ ಹಾಜರಿದ್ದರು

ಚಿಕ್ಕೋಡಿ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿಯಲ್ಲಿ ಮಹಾದೇವ ದೇವಸ್ಥಾನದ ಭವ್ಯ ರಥದ ಪುರ ಪ್ರವೇಶ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ನೆರವೇರಿಸಿದರು.

ಬಸ್ ನಿಲ್ದಾಣದಿಂದ ಮಹಾದೇವ ದೇವಸ್ಥಾನದವರೆಗೆ ಸಕಲ ವಾದ್ಯಮೇಳದೊಂದಿಗೆ, ಆರತಿ, ಕುಂಭ, ದುರಡಿಗಳೊಂದಿಗೆ ಮೆರವಣಿಗೆ ನಡೆಯಿತು. ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು.

ಮಹಾದೇವ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾದಾನಿಗಳನ್ನು ಪೂಜ್ಯರು ಸತ್ಕರಿಸಿ ಗೌರವಿಸಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಸ್ಥಳೀಯ ಮುಖಂಡ ಜಗದೀಶ ಕವಟಗಿಮಠ, ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಅನಿಲ ಮಾನೆ, ಸುಭಾಷ ಕೌಲಾಪೂರೆ, ರವಿ ಹಂಪಣ್ಣವರ, ರಾಜು ಸೋಲಾಪೂರೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.