
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ತಾಜುದ್ದೀನ್ ಮುಲ್ಲಾ ಅವರಿಗೆ ಸೇರಿದ ರೂಬಿಯಾ ಹೈಟೆಕ್ ಕೋಳಿ ಫಾರ್ಮ್‌ನಲ್ಲಿದ್ದ 30 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸಾವನ್ನಪ್ಪಿವೆ.
ಕೋಳಿ ಫಾರ್ಮನಲ್ಲಿ ಸಂಗ್ರಹಿಟ್ಟಿದ್ದ ಔಷಧೋಪಕರಣ, ಮರಿಗಳ ಆಹಾರ ಸಾಮಗ್ರಿ, ಪ್ಲಾಸ್ಟಿಕ ತಾರ್ಪಾಲು ಸೇರಿ ಅಪಾರ ಪ್ರಮಾಣದ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾವೆ ಎಂದು ಸದಲಗಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಹಲವರು ಕೋಳಿ ಫಾರ್ಮ್ ಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋಳಿ ಫಾರ್ಮ್ ನ ಸಿಮೆಂಟ್ ಶೀಟ್‍ಗಳ ಛಾವಣಿ ಕುಸಿದು ಬಿದ್ದು ಪ್ರಮೋದಕುಮಾರ ಪಾಟೀಲ ಎಂಬುವವರು ತಲೆಗೆ ಗಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.