ADVERTISEMENT

ಸಂಜಯ್ ರಾವುತ್‌ ಅವರದ್ದು ಬಾಲಿಶ ಹೇಳಿಕೆ: ಆರಗ ಜ್ಞಾನೇಂದ್ರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 13:54 IST
Last Updated 21 ಡಿಸೆಂಬರ್ 2022, 13:54 IST
   

ಬೆಳಗಾವಿ: ‘ಸಂಜಯ ರಾವುತ್‌ ರಾಜಕೀಯ ಲಾಭಕ್ಕಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ಭಾರತ–ಚೀನಾ ಮತ್ತು ಕರ್ನಾಟಕ–ಮಹಾರಾಷ್ಟ್ರ ಗಡಿಗಳ ಕುರಿತು ವ್ಯತ್ಯಾಸವೇ ಗೊತ್ತಿಲ್ಲದ ಬಾಲಿಶಹೇಳಿಕೆ ಅವರದ್ದಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

‘ದೇಶಕ್ಕೆ ಚೀನಾ ನುಗ್ಗಿದಂತೆ ನಾವೂ ಕರ್ನಾಟಕಕ್ಕೆ ನುಗ್ಗುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಿಲ್ಲ’ ಎಂಬ ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ವಕ್ತಾರ ಸಂಜಯ ರಾವುತ್‌ ನೀಡಿದ ಹೇಳಿಕೆಗೆ, ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿದ್ದಾರೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ, ಅನಗತ್ಯವಾಗಿ ಹೇಳಿಕೆ ನೀಡಿ ಜನರ ಭಾವನೆ ಕೆರಳಿಸಬಾರದು. ಏನೇನೋ ಮಾತನಾಡಬಾರದು. ರಾವುತ್ ಹೇಳಿಕೆಯಿಂದ ಜನರ ಬದುಕಿಗೆ ತೊಂದರೆಯಾಗಬಾರದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.