ADVERTISEMENT

ಬೆಳಗಾವಿ | ಚಲಾವಣೆ ಇಲ್ಲದ ₹400 ಕೋಟಿ ದರೋಡೆ?: ನಾಸಿಕ್‌ ಪೊಲೀಸರಿಂದ SPಗೆ ಪತ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:09 IST
Last Updated 22 ಜನವರಿ 2026, 2:09 IST
<div class="paragraphs"><p>ರದ್ದಾದ ನೋಟು</p></div>

ರದ್ದಾದ ನೋಟು

   

(ಪ್ರಾತಿನಿಧಿಕ ಚಿತ್ರ)

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿಯ ದರೋಡೆ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಮಹಾರಾಷ್ಟ್ರದ ನಾಸಿಕ್‌ ಪೊಲೀಸರು, ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಕಂಟೇನರ್‌ಗಳಲ್ಲಿ ₹2000 ಮುಖಬೆಲೆಯ ಸುಮಾರು ₹400 ಕೋಟಿ ಹಣವನ್ನು ಗೋವಾ ಕಡೆಗೆ ಸಾಗಿಸಲಾಗುತ್ತಿತ್ತು. ಅದನ್ನು ಚೋರ್ಲಾ ಬಳಿ ದರೋಡೆ ಮಾಡಲಾಗಿದೆ ಎಂದು ಸಂದೀಪ ಪಾಟೀಲ ಎಂಬ ವ್ಯಕ್ತಿ ನಾಸಿಕ್‌ ಪೊಲೀಸರಿಗೆ ಜ.1ರಂದು ದೂರು ನೀಡಿದ್ದಾರೆ. ಘಟನೆ 2025ರ ಅಕ್ಟೋಬರ್‌ 22ರಂದು ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚಲಾವಣೆಯಲ್ಲಿ ಇಲ್ಲದ ನೋಟುಗಳ ದರೋಡೆ ಆಗಿದೆ. ಈ ಬಗ್ಗೆ ತನಿಖೆಗೆ ಸಹಕಾರ ಕೋರಿ ನಾಸಿಕ್ ಪೊಲೀಸರು ಪತ್ರ ಬರೆದಿದ್ದಾರೆ. ತನಿಖೆ ಆರಂಭಿಸಿದ್ದೇವೆ ಎಂದು ಎಸ್ಪಿ ಕೆ.ರಾಮರಾಜನ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.