ADVERTISEMENT

ಅಥಣಿಯಲ್ಲಿ ಪುನುಗು ಬೆಕ್ಕು ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 13:39 IST
Last Updated 18 ಜುಲೈ 2022, 13:39 IST
ಅಥಣಿಯಲ್ಲಿ ಪುನುಗು ಬೆಕ್ಕು ಪತ್ತೆ
ಅಥಣಿಯಲ್ಲಿ ಪುನುಗು ಬೆಕ್ಕು ಪತ್ತೆ   

ಅಥಣಿ (ಬೆಳಗಾವಿ ಜಿಲ್ಲೆ): ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ಭಾನುವಾರ ರಾತ್ರಿ ಪುನುಗು ಬೆಕ್ಕು (ಸಿವೆಟ್‌ ಕ್ಯಾಟ್‌) ಪತ್ತೆಯಾಗಿದೆ. ಸೋಮವಾರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಕ್ಕನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.

ಭಾನುವಾರ ರಾತ್ರಿ ಅಥಣಿ ಪಟ್ಟಣದಲ್ಲಿ ಓಡಾಡಿದ ಈ ವಿಶೇಷ ಬೆಕ್ಕನ್ನು ಕಂಡು ಜನ ಬೆರಗಾದರು. ಚಿರತೆಯ ಮರಿಯ ಮೈಮಾಟ ಹೊಂದಿದ್ದರಿಂದ ಅದರ ‍ಫೋಟೊ ತೆಗೆಯಲು ಮುಗಿಬಿದ್ದರು.

ಮತ್ತೆ ಕೆಲ ಯುವಕರು ಸೇರಿಕೊಂಡು ಕೋಳಿ ಸಾಕಣೆ ಮಾಡುವ ಪಂಜರದಲ್ಲಿ ಬೆಕ್ಕನ್ನು ಹಿಡಿದಿಟ್ಟರು. ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ADVERTISEMENT

‘ಇಂಥ ಕಾಡುಬೆಕ್ಕು ಈ ಪ್ರದೇಶದಲ್ಲಿ ಬಹಳ ಅಪರೂಪ. ಎಲ್ಲಿಂದಲೋ ತಪ್ಪಿಸಿಕೊಂಡು ಇಲ್ಲಿಗೆ ಬಂದಿದೆ. ಬೆಕ್ಕನ್ನು ಮತ್ತೆ ಕಾಡಿನಲ್ಲಿ ಬಿಡಲಾಗುವುದು’ ಎಂದು ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.