ADVERTISEMENT

ಬೆಳಗಾವಿ: ಎರಡು ದಿನ ಬೊಮ್ಮಾಯಿ ಜಿಲ್ಲಾ ಪ್ರವಾಸ, ಸರಣಿ ಕಾರ್ಯಕ್ರಮಗಳಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 12:05 IST
Last Updated 23 ಸೆಪ್ಟೆಂಬರ್ 2021, 12:05 IST
   

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.25 ಹಾಗೂ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

25ರಂದು ಸಂಜೆ 7.30ಕ್ಕೆ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಪುರಸಭೆ ಆಡಳಿತ ಕಚೇರಿ ಕಟ್ಟಡ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನಿರ್ಮಿಸಿರುವ ಬಸ್‌ ನಿಲ್ದಾಣ ಉದ್ಘಾಟಿಸುವರು. ರಾತ್ರಿ 8.30ಕ್ಕೆ ಹುಕ್ಕೇರಿಯಲ್ಲಿ ಬಸ್ ಘಟಕ ಹಾಗೂ ಬಸ್ ನಿಲ್ದಾಣ ಉದ್ಘಾಟಿಸುವರು. ಕೃಷಿ ಡಿಪ್ಲೊಮಾ ಕಾಲೇಜು ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9.30ಕ್ಕೆ ಹುಣ್ಣೂರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವರು. ರಾತ್ರಿ 11.15ಕ್ಕೆ ಬೆಳಗಾವಿಗೆ ಬಂದು ವಾಸ್ತವ್ಯ ಹೂಡುವರು.

ಸೆ. 26ರಂದು ಬೆಳಿಗ್ಗೆ 9.15ಕ್ಕೆ ಶಹಾಪುರದ ಶಿವಾಜಿ ಉದ್ಯಾನದ ಸಮೀಪದಲ್ಲಿ ದಿ.ರವೀಂದ್ರ ಕೌಶಿಕ್ ಇ–ಗ್ರಂಥಾಲಯ ಉದ್ಘಾಟಿಸುವರು. ಬೆಳಿಗ್ಗೆ 9.30ಕ್ಕೆ ಹಿಂದವಾಡಿಯ ಮಹಾವೀರ ಭವನದಲ್ಲಿ ನಗರಪಾಲಿಕೆಯ ಬಿಜೆಪಿ ಸದಸ್ಯರನ್ನು ಸನ್ಮಾನಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬೆಳಿಗ್ಗೆ 10.15ಕ್ಕೆ ತಿಲಕವಾಡಿಯ ಮಹಾತ್ಮಫುಲೆ ಉದ್ಯಾನದಲ್ಲಿ ವಿಶೇಷ ಮಕ್ಕಳು ಮತ್ತು ಅಂಗವಿಕಲರು ಹಾಗೂ ಪೋಷಕರಿಗೆ ನಿರ್ಮಿಸಿರುವ ಉದ್ಯಾನ ಉದ್ಘಾಟಿಸುವರು. ಬೆಳಿಗ್ಗೆ 11ಕ್ಕೆ ಸಾಂಗವಾಂವ ರಸ್ತೆಯಲ್ಲಿ ಸುರೇಶ ಅಂಗಡಿ ಶಿಕ್ಷಣ ಪ್ರತಿ‌ಷ್ಠಾನ ಆವರಣದಲ್ಲಿ ದಿವಂಗತ ಸುರೇಶ ಅಂಗಡಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2ಕ್ಕೆ ರಸ್ತೆ ಮೂಲಕ ಗದಗ ಜಿಲ್ಲೆಗೆ ತೆರಳುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.