ADVERTISEMENT

ಜೋಡಿ ರೈಲು ಮಾರ್ಗ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:55 IST
Last Updated 24 ನವೆಂಬರ್ 2020, 16:55 IST
ಚಿಕ್ಕೋಡಿ ರಸ್ತೆ– ರಾಯಬಾಗ ರೈಲು ನಿಲ್ದಾಣದವರೆಗೆ ಜೋಡಿ ಮಾರ್ಗವನ್ನು ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಎ.ಕೆ. ರಾಯ್‌ ಮಂಗಳವಾರ ಪರಿಶೀಲಿಸಿದರು
ಚಿಕ್ಕೋಡಿ ರಸ್ತೆ– ರಾಯಬಾಗ ರೈಲು ನಿಲ್ದಾಣದವರೆಗೆ ಜೋಡಿ ಮಾರ್ಗವನ್ನು ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಎ.ಕೆ. ರಾಯ್‌ ಮಂಗಳವಾರ ಪರಿಶೀಲಿಸಿದರು   

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ರಸ್ತೆಯಿಂದ ರಾಯಬಾಗ ರೈಲು ನಿಲ್ದಾಣದವರೆಗೆ (13.94 ಕಿ.ಮೀ.) ಪೂರ್ಣಗೊಂಡಿರುವ ಜೋಡಿ ಮಾರ್ಗವನ್ನು ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಎ.ಕೆ. ರಾಯ್‌ ಮಂಗಳವಾರ ಪರಿಶೀಲಿಸಿ, ವೇಗದ ಟ್ರಯಲ್‌ ಕೂಡ ನಡೆಸಿದರು.

2015–16ನೇ ಸಾಲಿನಲ್ಲಿ ಮಂಜೂರಾಗಿರುವ ₹ 1191 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಲೋಂಡಾ–ಮೀರಜ್‌ ನಡುವಣ ಜೋಡಿ ರೈಲು ಮಾರ್ಗದ ಕಾಮಗಾರಿ ಭಾಗವಾಗಿ ಚಿಕ್ಕೋಡಿ ರಸ್ತೆ–ರಾಯಬಾಗದವರೆಗೆ ಮಾರ್ಗ ನಿರ್ಮಿಸಲಾಗಿದೆ. ಅಧಿಕಾರಿಗಳು ಮೊದಲು ಮೋಟಾರ್‌ ಟ್ರಾಲಿ ಮೂಲಕ ಪರಿಶೀಲಿಸಿದರು. ಬಳಿಕ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸ್ಪೀಡ್ ಟ್ರಯಲ್‌ ನಡೆಸಿದರು. ಈ ಪ್ರಕ್ರಿಯೆ ಸುಗಮವಾಗಿ ನಡೆಯಿತು.

ರಾಯಬಾಗ ನಿಲ್ದಾಣದ ಕಟ್ಟಡ ಹಾಗೂ ಪ್ರಯಾಣಿಕರಿಗೆ ಸೌಲಭ್ಯ ವ್ಯವಸ್ಥೆಯನ್ನೂ ಪರಿಶೀಲಿಸಿದರು.

ADVERTISEMENT

ಉಪ ಸಿಆರ್‌ಎಸ್ ಶ್ರೀನಿವಾಸ್, ಸಿಎಒ ಕೆ.ಸಿ. ಸ್ವಾಮಿ, ಎಡಿಆರ್‌ಎಂ ವಿಶ್ವಾಸ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.